ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ನಾಗಮಂಗಲದಲ್ಲಿ ಸರ್ಕಾರ ಓಲೈಕೆ ರಾಜಕಾರಣ ನಡೆಸುತ್ತಿದೆ'- ಆರ್‌ ಆಶೋಕ್‌

01:02 PM Sep 16, 2024 IST | BC Suddi
Advertisement

ಬೆಂಗಳೂರು: ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳು ಹೆಚ್ಚಾಗುತ್ತಿವೆ. ನಾಗಮಂಗಲದಲ್ಲಿ ಸರ್ಕಾರ ಓಲೈಕೆ ರಾಜಕಾರಣ ನಡೆಸುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ 25 ಜನರು ಹಿಂದೂಗಳ ಹೆಸರೇ ಇದೆ. ಇತ್ತ ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ್ದಾರೆ. ಈ ಸರ್ಕಾರ ಬಂದ ನಂತರ ಭಯವೇ ಇಲ್ಲದಂತಾಗಿದೆ. ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ದೇಶ ವಿರೋಧಿ ಶಕ್ತಿಗಳು ಹೆಚ್ಚಾಗುತ್ತಿವೆ ಎಂದರು.

ನಾಗಮಂಗಲ ಗಲಭೆಯಲ್ಲಿ ನಲ್ಲಿ ಹಿಂದೂಗಳ ಮೇಲೆ ಹೆಚ್ಚು ಕೇಸ್ ಹಾಕಲಾಗಿದೆ. ಗಲಭೆಯಲ್ಲಿ ಪಿಎಫ್‍ಐ ಲಿಂಕ್ ಇದ್ದವರೂ ಇದ್ದರು ಎನ್ನಲಾಗಿದೆ. ಅವರನ್ನು ಕೇರಳದಿಂದ ಕರೆಸುವ ಕೆಲಸವನ್ನು ಕಿಡಿಗೇಡಿ ಮುಸ್ಲಿಮರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲೂ ಕೋಮುಗಲಭೆ ನಡೆಯುತ್ತಿದೆ. ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದು ರಾಜಾರೋಷವಾಗಿ ಘೋಷಣೆ ಕೂಗುತ್ತಾ ಹೋಗಿದ್ದಾರೆ. ಈ ಸರ್ಕಾರ ಬಂದ ಮೇಲೆ ಭಯೋತ್ಪಾದಕರಿಗೆ, ಪಿಎಫ್‍ಐನವ್ರಿಗೆ ಭಯ ಇಲ್ಲದಂತಾಗಿದೆ. ಒಂದು ಕಡೆ ರಾಹುಲ್ ವಿದೇಶಗಳಲ್ಲಿ ಭಾರತ ಬಗ್ಗೆ ಟೀಕೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

 

Advertisement
Next Article