For the best experience, open
https://m.bcsuddi.com
on your mobile browser.
Advertisement

ನರೇಂದ್ರ ಮೋದಿ 3.0: ಪ್ರಮಾಣ ವಚನ ಸಮಾರಂಭಕ್ಕೆ ಹರಿದು ಬರಲಿದೆ ವಿದೇಶಿ ಗಣ್ಯರ ದಂಡು

12:04 PM Jun 06, 2024 IST | Bcsuddi
ನರೇಂದ್ರ ಮೋದಿ 3 0  ಪ್ರಮಾಣ ವಚನ ಸಮಾರಂಭಕ್ಕೆ ಹರಿದು ಬರಲಿದೆ ವಿದೇಶಿ ಗಣ್ಯರ ದಂಡು
Advertisement

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಒಕ್ಕೂಟ ಬಹುಮತ ಪಡೆದು ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿದೆ. ಸತತ ಮೂರನೇ ಬಾರಿಗೆ ಚುನಾವಣೆಯಲ್ಲಿ ಗೆದ್ದು ದೇಶದ ಪ್ರಧಾನಿಯಾದ ದೇಶದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಈ ಬಾರಿ ಪಾತ್ರರಾಗಲಿದ್ದು, ಜೂನ್ 8ರಂದು ರಾತ್ರಿ 8 ಗಂಟೆಗೆ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗುತ್ತಿದೆ.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾದ ಹಲವಾರು ಪ್ರಮುಖ ನಾಯಕರು ಸೇರಿದಂತೆ ವಿದೇಶಿ ಗಣ್ಯರು ಸಹ ಭಾಗಿಯಾಗಲಿದ್ದಾರೆ. ಈ ಪೈಕಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವುವುದು ಖಚಿತವಾಗಿದೆ.

ಪ್ರಧಾನಿ ಹಸೀನಾ ಮತ್ತು ದಹಲ್ ಇಬ್ಬರೂ ಈ ಹಿಂದೆ 18 ನೇ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸಾಧನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದರು.

Advertisement

ಶ್ರೀಲಂಕಾದ ಅಧ್ಯಕ್ಷ ವಿಕ್ರಮಸಿಂಘೆ, ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ , ಭೂತಾನ್ ರಾಜ ಕೂಡಾ ಭಾಗವಹಿಸುವ ಸಾಧ್ಯತೆ ಇದೆ.

Author Image

Advertisement