For the best experience, open
https://m.bcsuddi.com
on your mobile browser.
Advertisement

ನಮ್ಮ ಮುಟ್ಟಾಳತನದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡೆವು - ಕೆ.ಎಸ್ ಈಶ್ವರಪ್ಪ

02:50 PM Dec 03, 2023 IST | Bcsuddi
ನಮ್ಮ ಮುಟ್ಟಾಳತನದಿಂದ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡೆವು   ಕೆ ಎಸ್ ಈಶ್ವರಪ್ಪ
Advertisement

ಬೆಂಗಳೂರು: 4 ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದ ಮೇಲೆ ನಮ್ಮ ದೇಶಕ್ಕೆ ಭವಿಷ್ಯವಿದೆ ಎಂದು ಅನಿಸುತ್ತಿದೆ. ಆದರೆ ಕರ್ನಾಟಕದ ಮತದಾರರ ವಿಚಾರದಲ್ಲಿ ನಾವು ಮಾಡಿಕೊಂಡ ಮುಟ್ಟಾಳತನದಿಂದ ಅಧಿಕಾರ ಕಳೆದುಕೊಂಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ತಿಳಿಸಿದ್ದಾರೆ.

4 ರಾಜ್ಯಗಳ ಪೈಕಿ ಮಧ್ಯಪ್ರದೇಶ, ಛತ್ತಿಸ್‌ಗಢ ಹಾಗೂ ರಾಜಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿಯೂ ಬಿಜೆಪಿ ಒಟ್ಟಾಗಿ ಹೋಗಿದ್ದರೆ, ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ. ನಮ್ಮ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ಕಾಂಗ್ರೆಸ್‌ ಬಡವರಿಗೆ ನೀಡಿದ ಗ್ಯಾರಂಟಿಗಳನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಇವೆಲ್ಲ ಅಂಶಗಳು ಬಿಜೆಪಿ ಸೋಲಲು ಕಾರಣವಾಯಿತು ಎಂದರು.

ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢ ರಾಜ್ಯಗಳೂ ಸೇರಿದಂತೆ ಇಡೀ ದೇಶದಲ್ಲಿ ಗ್ಯಾರಂಟಿ ನೀಡಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಯತ್ನಿಸಿತ್ತು. ಆದರೆ ಈ ಚುನಾವಣೆಯಲ್ಲಿ ಅದು ವಿಫಲವಾಗಿದೆ. ಇವಿಷ್ಟೇ ಅಲ್ಲದೇ ಹಿಂದೂ-ಮುಸ್ಲಿಂ ಸಮುದಾಯದ ಬಗೆಗಿನ ತುಷ್ಟೀಕರಣ ರಾಜಕೀಯ ಇವೆಲ್ಲವೂ ಕಾಂಗ್ರೆಸ್‌ ಸೋಲಿಗೆ ಕಾರಣವಾಗಿದೆ. ನಮ್ಮ ನಾಯಕರು ಇಂದೇ ಪಾಠ ಕಲಿಯಬೇಕು. ನಮ್ಮ ರಾಜ್ಯದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾಯಕರು ಮಾಡಿದ ತಪ್ಪಿನಿಂದ ಕಾರ್ಯಕರ್ತರು ನೊಂದಿದ್ದಾರೆ. ಆದ್ದರಿಂದ ನಾವೆಲ್ಲರೂ ಸೇರಿ ಮುಂಬರುವ ಚುನಾವಣೆ ಎದುರಿಸಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Author Image

Advertisement