ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಮಸ್ಕಾರ ದೇವ್ರು…!! ಕರ್ನಾಟಕವನ್ನು ಕಾಪಾಡು.. ಅಂತಾ ವಿದೇಶದಲ್ಲಿ ಡಾ. ಬ್ರೋ ಪ್ರಾರ್ಥನೆ..! ಯಾತಕ್ಕಾಗಿ..?

03:41 PM Jun 26, 2024 IST | Bcsuddi
Advertisement

ನಮಸ್ಕಾರ ದೇವ್ರು.. ಎನ್ನುತ್ತಲೇ ನಮ್ಮ ಕಣ್ಣೆದುರಿಗೆ ಬರುವ ಡಾ.ಬ್ರೋ ಅಥವಾ ಗಗನ್ ಹತ್ತು ಹಲವು ದೇಶಗಳನ್ನು ಸುತ್ತಿ ಅವುಗಳನ್ನು ಕರ್ನಾಟಕದವರಿಗೆ ನಮ್ಮ ಭಾಷೆ ಕನ್ನಡದಲ್ಲೇ ಪರಿಚಯಿಸಿದವರು. ಕನ್ನಡಿಗರ ಮನೆ ಮಾತಾಗಿರುವ ಡಾ. ಬ್ರೋ ಜಗತ್ತಿನ ಅತ್ಯಂತ ದೊಡ್ಡ ದೇಶ ಯೂರೋಪ್‌ಗೆ ಭೇಟಿ ನೀಡಿದ್ದಾರೆ.

Advertisement

ಯೂರೋಪ್‌ ದೇಶದ ಪ್ರಸಿದ್ಧ ಸ್ಥಳಗಳ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಡಾ.ಬ್ರೋ, ಅಲ್ಲಿನ ಪುರಾತನ ಚರ್ಚ್‌ಗೆ ಭೇಟಿ ನೀಡಿದ್ದು, ಪೂಜೆ ಸಲ್ಲಿಸುವ ವೇಳೆ ಕರ್ನಾಟಕದ ಬಗ್ಗೆ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಡಾ.ಬ್ರೋ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ಯೂರೋಪ್‌ ದೇಶದ ವಿಡಿಯೋದಲ್ಲಿ ‘ಹಾಲೆಲೂಯಾ.. ತಂದೆ ನಮ್ಮ ಕರ್ನಾಟಕದ ಮೇಲೆ ಅದ್ಯಾವ ಗುಳ್ಳೆ ನರಿ ಕಣ್ಣು ಬಿತ್ತು ಏನೋ? ಏನೇನು ಆಗಬಾರದೋ ಅದೆಲ್ಲಾ ಆಗುತ್ತಿದೆ ಈ ನಡುವೆ. ಕಾಪಾಡು ತಂದೆ’ ಎಂದು ದೇವರಿಗೆ ಕ್ಯಾಂಡಲ್‌ ಹಚ್ಚಿದ್ದಾರೆ. ಅಲ್ಲದೇ ಅಲ್ಲಿನ ದೇವರುಗಳ ವಿಡಿಯೋವನ್ನು ಸಂಪೂರ್ಣವಾಗಿ ಡಾ.ಬ್ರೋ ತೋರಿಸಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಕರ್ನಾಟಕದ ಒಳಿತಿಗೆ ಪ್ರಾರ್ಥಿಸಿರುವ ಕನ್ನಡದ ಕುವರನಿಗೆ ನೋಡುಗರು ಜೈ ಎಂದಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ನಡೆದ ಸಾಲು ಸಾಲು ಘಟನೆಗಳೇನು..? ಮುಂದೆ ಓದಿ…

ಕರ್ನಾಟಕದಲ್ಲಿ ಇತ್ತೀಚಿಗೆ ನಡೆದ ಅಹಿತಕರ ಘಟನೆಗಳು ಏನೇನು..?
* ಕರ್ನಾಕದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಭಾರೀ ಬರಗಾಲ ತಲೆದೂರಿತ್ತು. ರಾಜ್ಯದ ಬಹುತೇಕ ಭಾಗದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ನಡೆದಿತ್ತು.

* ಕರ್ನಾಟಕದ ವಿವಿಧೆಡೆ ಅಗ್ನಿ ಅವಘಡ ಅದರಲ್ಲೂ ಪಟಾಕಿ ದುರಂತದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನ ಕಾರ್ಮಿಕರ ಸಾವು.

* ಬೇಸಿಗೆಯ ಬಿಸಿಲು ತಾಳದೇ ಜನರ ಒದ್ದಾಟ.

* ಹುಬ್ಬಳ್ಳಿ ಅಂಜಲಿ ಹಾಗೂ ನೇಹಾ ಹಿರೇಮಠ ಎನ್ನುವ ವಿದ್ಯಾರ್ಥಿಗಳ ಕೊಲೆ.

* ಬೆಳಗಾವಿಯಲ್ಲಿ ಜೈನ ಮುನಿಯ ಭರ್ಬರ ಹತ್ಯೆ.

ಕರ್ನಾಟಕದಲ್ಲಿ ರಾಜಕೀಯ ಹಾಗೂ ಸಿನಿಮಾಟ ಸೆಲೆಬ್ರೆಟಿಗಳ ಬಂಧನ

ಹಾಲಿ ಶಾಸಕರ ಮೇಲೆ ದಾಖಲಾದ ಸರಣಿ ಪ್ರಕರಣಗಳು.

* ಲೈಂಗಿಕ ದೌರ್ಜನ್ಯ ಆರೋಪದಡಿ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಜೈಲು ಪಾಲಾಗಿದ್ದಾರೆ. ಕರ್ನಾಟಕದಲ್ಲಿ ಇದೊಂದು ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ ಎಂದು ಪರಿಗಣಿಸಲಾಗಿದ್ದು, ಲೋಕಸಭಾ ಚುನಾವಣೆ ಬಳಿಕ ವಿದೇಶ ಸೇರಿದ್ದ ಪ್ರಜ್ವಲ್‌ ರೇವಣ್ಣರನ್ನ ಕಾದು ಬಂಧಿಸಲಾಗಿತ್ತು. ಸದ್ಯ ಎಸ್‌ಐಟಿ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ.

* ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಕಿಡ್ನಾಪ್‌ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಲಾಗಿದೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ತೂಗುದೀಪರನ್ನ ಬಂಧಿಸಲಾಗಿದೆ. ಅಲ್ಲದೇ ದರ್ಶನ್‌ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಹತ್ತಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಜೋರಾಗಿಯೇ ನಡೆಯುತ್ತಿದ್ದು, ನಟ ದರ್ಶನ್‌ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ.

* ಇನ್ನು ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಜನತಾದಳ (ಜೆಡಿಎಸ್) ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣರನ್ನು ಬಂಧಿಸಲಾಗಿದ್ದು, ತನಿಖೆ ಮುಂದಿನ ಭಾಗವಾಗಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Advertisement
Next Article