ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಟಿ ಶ್ರದ್ಧಾ ಕಪೂರ್, ರಾಹುಲ್ ಮೋದಿ ಬ್ರೇಕ್ ಅಪ್.!

05:40 PM Aug 05, 2024 IST | BC Suddi
Advertisement

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ತನ್ನ ಬಾಯ್ ಫ್ರೆಂಡ್ ರಾಹುಲ್ ಮೋದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು, ಬ್ರೇಕ್ ಅಪ್ ವದಂತಿಗಳನ್ನು ಹುಟ್ಟುಹಾಕಿದೆ. ನಟಿ ಶ್ರದ್ಧಾ ಕಪೂರ್ ಅವರು ರಾಹುಲ್ ಸಹೋದರಿಯನ್ನು ಕೂಡ ಅನ್ ಫಾಲೋ ಮಾಡಿದ್ದಾರೆ. ಸ್ಕ್ರಿಪ್ಟ್​​​ರೈಟರ್​​ ರಾಹುಲ್​ ಮೋದಿ ಜೊತೆ ನಟಿ ಶ್ರದ್ಧಾ ಕಪೂರ್ ರಿಲೇಶನ್​​ಶಿಪ್​ನಲ್ಲಿದ್ದಾರೆ ಎಂಬ ವದಂತಿಗಳಿವೆ. ಹಲವು ಈವೆಂಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾಗ್ಯೂ, ಈವರೆಗೆ ವದಂತಿಗಳಿಗೆ ಪ್ರತಿಕ್ರಿಯಿಸಿರಲಿಲ್ಲ. ಜೂನ್‌ನಲ್ಲಿ ಶ್ರದ್ಧಾ, ರಾಹುಲ್ ಮೋದಿ ಅವರೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಬಹುತೇಕ ದೃಢಪಡಿಸಿದ್ದರು. ಅದಾಗ್ಯೂ, ಸ್ಪಷ್ಟ - ಅಧಿಕೃತ ಹೇಳಿಕೆಗಳಿಗೆ ಕಾಯಲಾಗಿತ್ತು. ಫೋಟೋದಲ್ಲಿ ಈ ಜೋಡಿ ಮ್ಯಾಚಿಂಗ್​​ ವೈಟ್​​ ಡ್ರೆಸ್​​​​ನಲ್ಲಿ ಕಂಗೊಳಿಸಿದ್ದರು. ಫೋಟೋ ಶೇರ್​ ಮಾಡಿದ ಚೆಲುವೆ, "ದಿಲ್ ರಖ್ ಲೇ, ನೀಂದ್ ತೋ ವಾಪಸ್ ದೆ ದೆ ಯಾರ್ " (ನನ್ನ ದಿಲ್​​ ಇಟ್ಟುಕೊಳ್ಳಿ, ಆದ್ರೆ ನನ್ನ ನಿದ್ರೆಯನ್ನು ಮರಳಿಸಿ) ಎಂದು ಸ್ಮೈಲಿ, ರೆಡ್​ ಹಾರ್ಟ್ ಎಮೋಜಿಗಳೊಂದಿಗೆ ಬರೆದುಕೊಂಡಿದ್ದರು. ಜೊತೆಗೆ ರಾಹುಲ್ ಮೋದಿ ಇನ್​​ಸ್ಟಾ ಐಡಿಗೆ ಟ್ಯಾಗ್​ ಮಾಡಿದ್ದರು. ಪೋಸ್ಟ್‌ ಇಷ್ಕ್ ಚಿತ್ರದ "ನೀಂದ್ ಚುರಾಯೀ ಮೇರಿ" ಹಾಡನ್ನು ಸಹ ಒಳಗೊಂಡಿತ್ತು. ರೊಮ್ಯಾಂಟಿಕ್ ಪೋಸ್ಟ್​​ ಸಾಕಷ್ಟು ಮೆಚ್ಚುಗೆಗಳನ್ನು ಪಡೆದುಕೊಂಡಿತ್ತು.

Advertisement

Advertisement
Next Article