For the best experience, open
https://m.bcsuddi.com
on your mobile browser.
Advertisement

ನಟಿ ಅಮೂಲ್ಯ ಸಹೋದರ, ಸ್ಯಾಂಡಲ್‌ವುಡ್‌ ನಿರ್ದೇಶಕ ದೀಪಕ್ ನಿಧನ

10:06 AM Oct 18, 2024 IST | BC Suddi
ನಟಿ ಅಮೂಲ್ಯ ಸಹೋದರ  ಸ್ಯಾಂಡಲ್‌ವುಡ್‌ ನಿರ್ದೇಶಕ ದೀಪಕ್ ನಿಧನ
Advertisement

ಬೆಂಗಳೂರು : ಕನ್ನಡದ ಖ್ಯಾತ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ದೀಪಕ್​ ಅರಸ್​ ಅವರು ನಿನ್ನೆ ಕೊನೆಯುಸಿರು ಎಳೆದಿದ್ದಾರೆ.

ಕಿಡ್ನಿ ವೈಫಲ್ಯದಿಂದ ದೀಪಕ್ ಅರಸ್ ಅವರು ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ದೀಪಕ್ ಅರಸ್​ ಗುರುತಿಸಿಕೊಂಡಿದ್ದರು. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ದೀಪಕ್ ಅರಸ್‌ ನಿಧನರಾಗಿದ್ದಾರೆ. ಅಮೂಲ್ಯ ಸಹೋದರ ದೀಪಕ್ ಅರಸ್ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಮನಸಾಲಜಿ, ಶುಗರ್ ಫ್ಯಾಕ್ಟರಿ ಸಿನಿಮಾಗಳನ್ನು ದೀಪಕ್ ನಿರ್ದೇಶಿಸಿದ್ದಾರೆ.

Advertisement
Author Image

Advertisement