ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಗರ ಸಭೆ ಆಸ್ತಿ ಅತಿಕ್ರಮಣ ಅಪರಾಧ : ಅನಧಿಕೃತ ನಿರ್ಮಾಣಗಳ ತೆರವು

07:07 AM May 10, 2024 IST | Bcsuddi
Advertisement

 

Advertisement

 ಚಿತ್ರದುರ್ಗ: ನಗರ ಸಭೆಯ ರಸ್ತೆ, ಚರಂಡಿ ಹಾಗೂ ಖಾಲಿ ಜಾಗಗಳನ್ನು ಒತ್ತುವರಿ ಮಾಡಿ ತಾತ್ಕಾಲಿಕ ಶೆಡ್,ಕಟ್ಟಡ, ಕಾಂಪೌAಡ್, ನೀರಿನ ಸಂಪುಗಳನ್ನು ನಿರ್ಮಾಣ ಮಾಡುವುದು ಅಪರಾಧವಾಗಿದೆ. ಸಾರ್ವಜನಿಕರು ನಿಯಮ ಬಾಹಿರವಾಗಿ ಅನಧಿಕೃತ ನಿರ್ಮಾಣ ಮಾಡಿದರೆ, ನಗರ ಸಭೆಯಿಂದ ತೆರವು ಮಾಡುವುದಾಗಿ ಪೌರಾಯುಕ್ತೆ ಎಂ.ರೇಣುಕಾ ಎಚ್ಚರಿಸಿದ್ದಾರೆ.

ನಗರದ ಕೆ.ಹೆಚ್.ಬಿ ಕಾಲೋನಿ ಹಾಗೂ ಬಿ.ಎಲ್.ಗೌಡ ಲೇಔಟ್‌ನಲ್ಲಿ ನಗರ ಸಭೆ ಜಾಗದಲ್ಲಿ ನಿರ್ಮಿಸಿದ್ದ ಅನಧಿಕೃತ ಕಟ್ಟಗಳನ್ನು ಮೇ.8 ರಂದು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ. ನಗರಸಭೆಯ ಜಾಗ, ರಸ್ತೆ, ಚರಂಡಿ, ಉದ್ಯಾನವಗಳು ಸಾರ್ವಜನಿಕರ ಅನೂಕೂಲಕ್ಕಾಗಿ ಬಳಸಲಾಗುತ್ತದೆ. ಇವುಗಳನ್ನು ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಗರ ಸಭೆಯಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದರೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಕಲಂ 187(ಎ)(ಸಿ)ರಂತೆ ದಂಡ ವಿಧಿಸಿ, ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು ಎಂದು ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

Tags :
ನಗರ ಸಭೆ ಆಸ್ತಿ ಅತಿಕ್ರಮಣ ಅಪರಾಧ : ಅನಧಿಕೃತ ನಿರ್ಮಾಣಗಳ ತೆರವು
Advertisement
Next Article