ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಕ್ಸಲರ ಶರಣಾಗತಿಗೆ ಸರಕಾರ ಪುನರ್ವಸತಿ ಪ್ರೋತ್ಸಾಹಧನ : ಡಾ. ಬಂಜಗೆರೆ ಜಯಪ್ರಕಾಶ್.!

11:27 AM May 16, 2024 IST | Bcsuddi
Advertisement

 

Advertisement

ಶಿವಮೊಗ್ಗ; ನಕ್ಸಲರು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸರಕಾರ ಮುಂದಾಗಿದೆ. ಶರಣಾಗತರಾದರೆ ಅವರಿಗೆ ಸರಕಾರ ಪುನರ್ವಸಿತಿ ಹಾಗೂ ಪ್ರೋತ್ಸಾದನ ನೀಡಲಾಗುತ್ತದೆ ಎಂದು ಡಾ. ಬಂಜಗೆರೆ ಜಯಪ್ರಕಾಶ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, ಅವರು, ಈ ಹಿಂದೆ ನಕ್ಸಲ್ ಚಳುವಳಿಯಲ್ಲಿ ಸಕ್ರಿಯರಾದವರು, ಕರ್ನಾಟಕ ರಾಜ್ಯದ ಹಲವು ಪ್ರದೇಶಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ನಕ್ಸಲ್ ಚಳುವಳಿ/ಎಡಪಂಥೀಯ/ತೀವ್ರಗಾಮಿ ಚಟುವಟಿಕೆಗಳು ಸಕ್ರಿಯವಾಗಿರುವುದು ಕಂಡುಬಂದಿದೆ.

ಅಂತಹ ಪ್ರದೇಶಗಳಲ್ಲಿ ನಿರುದ್ಯೋಗ, ಅಸಮಾನತೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುತ್ತದೆಂಬ ಅಪಪ್ರಚಾರವು ನಿರುದ್ಯೋಗಿ ಯುವಕರನ್ನು ನಕ್ಸಲ್ ಸಿದ್ಧಾಂತ/ಎಡಪಂಥೀಯ ಭಯೋತ್ಪಾದನೆ ಕಡೆಗೆ ಆಕರ್ಷಿತರಾಗುವಂತೆ ಮಾಡಿರುತ್ತದೆ.

ರಾಜ್ಯ ಸರ್ಕಾರವು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಶ್ರಮಿಸುತ್ತಿದೆ.

ಶರಣಾಗತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ನೀಡಬೇಕಾದ ಪ್ರೋತ್ಸಾಹಧನ/ಸಹಾಯಧನ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಗೋಷ್ಟಿಯಲ್ಲಿ, ಹಿರಿಯ ಪತ್ರಕರ್ತರಾದ ಪಾರ್ವತೀಶ ಬಿಳಿದಾಳೆ. ಹಾಗೂ ವಕೀಲರಾದ ಕೆ.ಪಿ.ಶ್ರೀಪಾಲ ಭಾಗವಹಿಸಿದ್ದರು.

Advertisement
Next Article