For the best experience, open
https://m.bcsuddi.com
on your mobile browser.
Advertisement

ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ವಿರೋಧ

09:40 AM Mar 19, 2024 IST | Bcsuddi
ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ವಿರೋಧ
Advertisement

ಬೆಂಗಳೂರು: ಮಾರ್ಚ್‌ 22ರಂದು ದ್ವಿತೀಯ ಪಿಯು ಪರೀಕ್ಷೆ ಮುಕ್ತಾಯಗೊಳ್ಳಲಿದ್ದು, ಮಾರ್ಚ್‌ 23ರಂದೇ ಮೌಲ್ಯಮಾಪನ ಆರಂಭ ಗೊಳ್ಳುತ್ತಿರುವುದಕ್ಕೆ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮೌಲ್ಯಮಾಪನ ಬಹಿ ಷ್ಕರಿಸಬೇಕೆಂಬ ತೀರ್ಮಾನದಿಂದ ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾ ಸಕರ ಸಂಘ ಹಿಂದೆ ಸರಿದಿದೆ.ರಾಜ್ಯದಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಗೆ ಸುಮಾರು 6.98 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, 36 ಲಕ್ಷ ಪತ್ರಿಕೆಗಳ ಮೌಲ್ಯಮಾಪನ ನಡೆಯಬೇಕಿದೆ. ವಾರ್ಷಿಕ ಪರೀಕ್ಷೆ-1 ಪೂರ್ಣಗೊಳಿಸಿ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಿ ವಾರ್ಷಿಕ ಪರೀಕ್ಷೆ-2ಕ್ಕೆ ತಯಾರಿ ನಡೆಸುವುದು ಮತ್ತು ಚುನಾವಣ ಪ್ರಕ್ರಿಯೆಯಲ್ಲಿ ಉಪನ್ಯಾಸಕರು ಪಾಲ್ಗೊಳ್ಳುವುದರಿಂದ ಚುನಾವಣ ಕೆಲಸಗಳು ಆರಂಭಗೊಳ್ಳುವ ಮುಂಚಿತವಾಗಿ ಮೌಲ್ಯಮಾಪನ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂಬುದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ)ಯ ಆಶಯ. ಅದ ರಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಐಚ್ಛಿಕ ಕನ್ನಡ ವಿಷಯಗಳ ಮೌಲ್ಯಮಾಪನಕ್ಕೆ ಉಪ ಮುಖ್ಯ ಮೌಲ್ಯಮಾಪಕರು ಮಾ. 23ರಂದು ಪರೀಕ್ಷಾ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಕೆಎಸ್‌ಇಎಬಿ ಸೂಚಿಸಿದೆ.

ಬಹುತೇಕ ಶಿಕ್ಷಕರು ತಮ್ಮ ವಾಸಸ್ಥಾನದಿಂದ ದೂರದ ಪರೀಕ್ಷಾ ಕೇಂದ್ರಗಳಲ್ಲಿ ಮೇಲ್ವಿಚಾರಣೆ ಸಹಿತ ಇತರ ಪರೀಕ್ಷಾ ಕೆಲಸಗಳನ್ನು ನಿರ್ವ ಹಿಸುತ್ತಿದ್ದಾರೆ. ಅದರ ಮರು ದಿನವೇ ಮತ್ತೆ 200-300 ಕಿಮೀ ದೂರದಲ್ಲಿನ ಮೌಲ್ಯಮಾಪನ ಕೇಂದ್ರಕ್ಕೆ ಹೋಗಿ ಮೌಲ್ಯಮಾಪನ ಚಟುವಟಿಕೆ ನಡೆಸು ವುದು ಕಷ್ಟ ಎಂದು ಉಪ ನ್ಯಾಸಕರು ಹೇಳುತ್ತಿದ್ದಾರೆ. ಅದರಲ್ಲೂ ಈ ಬಾರಿ ನೆರೆಯ ಜಿಲ್ಲೆಯ ಮೌಲ್ಯಮಾಪನ ಕೇಂದ್ರಗಳನ್ನು ಹೊರತುಪಡಿಸಿ ದೂರದ ಕೇಂದ್ರಗಳಿಗೆ ನಿಯೋಜಿಸ ಲಾಗಿದೆ. ಇದರಿಂದ ಉಪನ್ಯಾಸಕರಿಗೆ ಮೊದಲ ದಿನದ ಮೌಲ್ಯಮಾಪನ ಚಟುವಟಿಕೆಗೆ ಹಾಜ ರಾಗಲು ಕಷ್ಟವಾಗಲಿದೆ ಎಂದು ಉಪನ್ಯಾಸಕರು ನೋವು ತೋಡಿಕೊಂಡಿದ್ದಾರೆ. ಮಾ.25ರಂದು ಮೌಲ್ಯಮಾಪನ ಆರಂಭಿಸಿದರೆ ಅನುಕೂಲ ಎನ್ನುತ್ತಿದ್ದಾರೆ ಉಪನ್ಯಾಸಕರು.

ಎಪ್ರಿಲ್‌ 2ನೇ ವಾರ ದ್ವಿತೀಯ ಪಿಯು ಫ‌ಲಿತಾಂಶ?
ಕೆಎಸ್‌ಇಎಬಿಯ ಎಪ್ರಿಲ್‌ 8ಕ್ಕೆ ದ್ವಿತೀಯ ಪಿಯುಸಿ ಫ‌ಲಿತಾಂಶ ಪ್ರಕಟಿಸುವ ಗುರಿ ಇಟ್ಟುಕೊಂಡಿದೆ. ಹಾಗೆಯೇ ಎಪ್ರಿಲ್‌ 24ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಅನ್ನು ಪ್ರಾರಂಭಿಸುವ ಕರಡು ವೇಳಾಪಟ್ಟಿ ಸಿದ್ಧವಾಗಿತ್ತು. ಆದರೆ ಎಪ್ರಿಲ್‌ 26ಕ್ಕೆ ರಾಜ್ಯದಲ್ಲಿ ಮೊದಲ ಸುತ್ತಿನ ಚುನಾವಣೆ ನಡೆಯಲಿರುವುದರಿಂದ ಕರಡು ವೇಳಾಪಟ್ಟಿ ಬದಲಾವಣೆ ಅನಿವಾರ್ಯತೆಯಿದೆ. ವಾರ್ಷಿಕ ಪರೀಕ್ಷೆ-2 ಪ್ರಾರಂಭದ ದಿನಾಂಕ ಮುಂದೂಡುವ ಸಾಧ್ಯತೆಯಿರುವುದರಿಂದ ಮೌಲ್ಯಮಾಪನವನ್ನು ಸ್ವಲ್ಪ ತಡ ಮಾಡಿ, ಫ‌ಲಿತಾಂಶದ ದಿನವನ್ನು ಸ್ವಲ್ಪ ಮುಂದೂಡುವ ಬಗ್ಗೆಯೂ ಚರ್ಚೆ ನಡೆದಿದೆ.

Advertisement

Author Image

Advertisement