ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದೇಶದಲ್ಲಿ ಮೊದಲ ಜೆಎನ್.1 ಸೋಂಕು ಪತ್ತೆ: ರಾಜ್ಯದಲ್ಲಿ ಹೈ ಅಲರ್ಟ್

09:00 AM Dec 17, 2023 IST | Bcsuddi
Advertisement

ಹೊಸದಿಲ್ಲಿ: ಅತ್ಯಂತ ವೇಗವಾಗಿ ಹರಡಬಲ್ಲ ಕೊರೊನಾ ಸೋಂಕಿನ ಉಪತಳಿ ಜೆಎನ್.1 ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಪತ್ತೆಯಾಗಿದೆ. ಇದು ದೇಶದಲ್ಲಿ ಪತ್ತೆಯಾದ ಮೊದಲ ಪ್ರಕರಣವಾಗಿದೆ.

Advertisement

ಕೇರಳದಲ್ಲಿ ಡಿ.8 ರಂದು ಜೆಎನ್.1 ತಳಿಯು ಪತ್ತೆಯಾಗಿದ್ದು, 79 ವರ್ಷದ ವೃದ್ಧೆಯಲ್ಲಿ ಈ ಸೋಂಕು ದೃಢಪಟ್ಟಿದೆ. ವೃದ್ಧೆಯಲ್ಲಿ ನೆಗಡಿ, ಜ್ವರದ ಲಕ್ಷಣಗಳು ಕಂಡುಬಂದಿತ್ತು. ಇದೀಗ ಅವರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎನ್ನಲಾಗಿದೆ.

ಇನ್ನು ಕೇರಳದಲ್ಲಿ ಸೋಂಕು ಪತ್ತೆಯಾಗುತ್ತಿದ್ದಂತೆ ಕರ್ನಾಟಕ ರಾಜ್ಯ ದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಜೆಎನ್.1 ತಳಿ ವೇಗವಾಗಿ ವ್ಯಾಪಿಸುತ್ತದೆ. ಆದರೂ ಸೋಂಕಿನ ತೀವ್ರತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯಿಸಿಲ್ಲ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ(ಸಿಡಿಸಿ) ಮಾಹಿತಿ ನೀಡಿದೆ.

Advertisement
Next Article