'ದೇವಾಲಯಕ್ಕೆ ಭೇಟಿ ನಿರಾಕರಿಸಲು ನಾನೇನು ಅಪರಾಧ ಮಾಡಿದ್ದೇನೆ?' - ರಾಹುಲ್ ಗಾಂಧಿ
ಅಸ್ಸಾಂ " ದೇವಾಲಯಕ್ಕೆ ಭೇಟಿ ನೀಡದಂತೆ ನಿರಾಕರಣೆ ಮಾಡಲು, ನಾನೇನು ಅಪರಾಧ ಮಾಡಿದ್ದೇನೆ, ನಾವು ಯಾವುದೇ ಸಮಸ್ಯೆ ಹುಟ್ಟುಹಾಕುವುದಿಲ್ಲ, ಕೇವಲ ದೇವಾಲಯಕ್ಕೆ ತೆರಳುವುದು ಪ್ರಾರ್ಥನೆ ಸಲ್ಲಿಸಲು ಮಾತ್ರ" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. 15 ನೇ ಶತಮಾನದ ಅಸ್ಸಾಮಿ ಸಂತ ಮತ್ತು ವಿದ್ವಾಂಸರಾದ ಶ್ರೀಮಂತ ಶಂಕರದೇವ ಅವರ ಜನ್ಮಸ್ಥಳವಾದ ನಾಗಾಂವ್‌ನಲ್ಲಿರುವ ಬಟಾದ್ರವ ಸತ್ರ ದೇವಸ್ಥಾನಕ್ಕೆ ಭೇಟಿ ನೀಡದಂತೆ ಅಸ್ಸಾಂನ ಅಧಿಕಾರಿಗಳು ತಡೆಯುತ್ತಿದ್ದಾರೆ ಆರೋಪಿಸಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದೊಂದಿಗೆ ಸಂಭವನೀಯ ಘರ್ಷಣೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ತಮ್ಮ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ವೇಳೆ ಬಟ್ರದೇವ ಸತ್ರ ದೇವಾಲಯಕ್ಕೆ ಬೇಟಿ ನೀಡುವುದನ್ನು ತಪ್ಪಿಸಲು ರಾಹುಲ್ ಗಾಂಧಿಗೆ ಅವರು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ನಾನೇನು ಅಪರಾಧ ಮಾಡಿದ್ದೇನೆ ಎಂದು ಪ್ರಶ್ನಿಸಿದ್ದಾರೆ.
"ದೇವಾಲಯಕ್ಕೆ ಯಾರು ಭೇಟಿ ನೀಡಬೇಕೆಂದು ಈಗ ಪ್ರಧಾನಿ ನರೇಂದ್ರ ಮೋದಿಯವರು ನಿರ್ಧರಿಸುತ್ತಿದ್ದಾರೆ. ಅವರೊಬ್ಬರು ಮಾತ್ರ ಈಗ ದೇವಾಲಯಕ್ಕೆ ಪ್ರವೇಶಿಸಬಹುದು” ಎಂದು ವಿಚಾರವಾಗಿ ರಾಹುಲ್ ಕಡುವಾಗಿ ಟೀಕಿಸಿದ್ದಾರೆ. ಈ ಘಟನೆಯನ್ನು "ಯೋಜಿತ ದಾಳಿ" ಎಂದು ಆರೋಪಿಸಿದ ಕೈ ನಾಯಕರು ಮತ್ತು ರಾಹುಲ್ ಗಾಂಧಿ ನಾಗಾಂವ್‌ನಲ್ಲಿ ಧರಣಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ.