For the best experience, open
https://m.bcsuddi.com
on your mobile browser.
Advertisement

ದೇವಸ್ಥಾನದಲ್ಲಿ ಮೂತ್ರ ಮಾಡಿದ ಯುವಕ - ಹಿಂದೂಗಳ ಆಕ್ರೋಶ

08:52 AM Nov 05, 2023 IST | Bcsuddi
ದೇವಸ್ಥಾನದಲ್ಲಿ ಮೂತ್ರ ಮಾಡಿದ ಯುವಕ   ಹಿಂದೂಗಳ ಆಕ್ರೋಶ
Advertisement

ಮುರ್ಷಿದಾಬಾದ್: ಹಿಂದೂ ದೇವಾಲಯದಲ್ಲಿ ಮುಸ್ಲಿಂ ಯುವಕನೊಬ್ಬ ಮೂತ್ರ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಹಿಂದೂಗಳು ಯುವಕನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಬೆಲ್ಟ್ ಬಿಚ್ಚುತ್ತ ದೇವಸ್ಥಾನ ಪ್ರವೇಶಿಸುವ ಯುವಕ ಸೀದಾ ಹೋಗಿ ದೇವರ ಮೂರ್ತಿ ಮುಂದೆ ನಿಂತು ಮೂತ್ರ ಮಾಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಕೃತ್ಯ ಎಸಗಿದ ಯುವಕನನ್ನು ಅರಾ ಶೇಖ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಬಂಧಿಸಿರುವುದು ಇನ್ನೂ ದೃಢಪಟ್ಟಿಲ್ಲ .

Author Image

Advertisement