For the best experience, open
https://m.bcsuddi.com
on your mobile browser.
Advertisement

ದೇವಸ್ಥಾನಗಳಲ್ಲಿ ವಿಷಕಾರಿ ಅರಳಿ ಹೂಗಳ ಬಳಕೆಗೆ ನಿರ್ಬಂಧ - ಕೇರಳದ ದೇಗುಲದಲ್ಲಿ ನಿಷೇಧ

10:09 AM May 10, 2024 IST | Bcsuddi
ದೇವಸ್ಥಾನಗಳಲ್ಲಿ ವಿಷಕಾರಿ ಅರಳಿ ಹೂಗಳ ಬಳಕೆಗೆ ನಿರ್ಬಂಧ   ಕೇರಳದ ದೇಗುಲದಲ್ಲಿ ನಿಷೇಧ
Advertisement

ತಿರುವನಂತಪುರ: ತಿರುವಾಂಕೂರು ದೇವಸ್ವಂ ಮಂಡಳಿ(ಟಿಡಿಬಿ)ಯು ತನ್ನ ಅಧೀನದಲ್ಲಿರುವ ದೇವಾಲಯಗಳಲ್ಲಿ ಅರಳಿ ಹೂ(ಒಲಿಯಾಂಡರ್‌) ಅರ್ಪಿಸುವ ಸಂಪ್ರದಾಯವನ್ನು ನಿಲ್ಲಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ಹೂಗಳಲ್ಲಿರುವ ವಿಷಕಾರಕವು ಮನುಷ್ಯ, ಪ್ರಾಣಿಗಳಿಗೆ ಹಾನಿಮಾಡಬಹುದು ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಟಿಡಿಬಿ ಅಧೀನದ ದೇವಾಲಯಗಳಲ್ಲಿ ನೈವೇದ್ಯ ಹಾಗೂ ಪ್ರಸಾದದಲ್ಲಿ ಅರಳಿ ಹೂಗಳನ್ನು ಬಳಸದೇ ಇರಲು ನಿರ್ಧರಿಸಲಾಗಿದೆ.

ಇದರ ಬದಲಾಗಿ ತುಳಸಿ, ಮಲ್ಲಿಗೆ, ದಾಸವಾಳ, ಗುಲಾಬಿ ಬಳಸಲಾಗುವುದು ಎಂದು ಟಿಡಿಬಿ ಅಧ್ಯಕ್ಷರಾದ ಪಿ.ಎಸ್‌.ಪ್ರಶಾಂತ್‌ ತಿಳಿಸಿದರು.

Advertisement

Author Image

Advertisement