ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದೆಹಲಿ ರಾಯಬಾರಿ ಕಚೇರಿಯನ್ನು ಶಾಶ್ವತವಾಗಿ ಮುಚ್ಚಿದ ಅಫ್ಘಾನಿಸ್ತಾನ!

02:28 PM Nov 24, 2023 IST | Bcsuddi
Advertisement

ಅಫ್ಘಾನಿಸ್ತಾನ: ತಾಲಿಬಾನ್‌ ಉಗ್ರರ ಆಡಳಿತವಿರುವ ಅಫ್ಘಾನಿಸ್ತಾನವು ಭಾರತದಲ್ಲಿರುವ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಶಾಶ್ವತವಾಗಿ ಮುಚ್ಚಲಾಗಿದೆ.

Advertisement

ಸೆ. 30ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ರಾಯಭಾರ ಕಚೇರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ, ಭಾರತದ ಸರ್ಕಾರದಿಂದ ಎದುರಾಗುತ್ತಿರುವ ಸವಾಲುಗಳಿಂದಾಗಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಾಲಿಬಾನ್‌ ಆಡಳಿತವು ಆರೋಪಿಸಿದೆ.

ಕಾರ್ಯಾಚರಣೆಯ ಸ್ಥಗಿತದ ಕುರಿತು ಪ್ರಕಟಣೆ ಹೊರಡಿಸಿದ ಅಫ್ಘಾನಿಸ್ತಾನ ಸೆ. 30ರಂದು ಭಾರತದಲ್ಲಿರುವ ಅಘ್ಘನ್‌ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಭಾರತ ಸರ್ಕಾರದಿಂದ ಎದುರಾಗಿರುವ ಸವಾಲುಗಳಿಂದಾಗಿ ನ. 23ರಿಂದಲೇ ಜಾರಿಗೆ ಬರುವಂತೆ ರಾಯಭಾರ ಕಚೇರಿಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಭಾರತದಲ್ಲಿರುವ ಅಫ್ಘನ್‌ ನಾಗರಿಕರು ಸಹಕಾರ ನೀಡಿರುವುದಕ್ಕೆ ಕೃತಜ್ಞತೆಗಳು ಎಂದು ತಿಳಿಸಿದೆ.

ಭಾರತದಲ್ಲಿ ರಾಯಭಾರ ಕಚೇರಿಯನ್ನು ನಿರ್ವಹಿಸಲು ಸಾಕಷ್ಟು ಸಿಬ್ಬಂದಿಯ ಕೊರತೆ ಇದೆ ಎಂದು ಅಫ್ಘಾನಿಸ್ತಾನ ಇದಕ್ಕೂ ಮೊದಲು ತಿಳಿಸಿತ್ತು. ಆ ಮೂಲಕ ರಾಯಭಾರ ಕಚೇರಿ ನಿರ್ವಹಣೆಗೆ ಸಾಕಷ್ಟು ದುಡ್ಡಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ. ಆದರೂ, ಭಾರತದ ಮೇಲೆ ಅಫ್ಘನ್‌ ಆರೋಪ ಮಾಡಿದೆ.

Advertisement
Next Article