ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಿಲ್ಲಿ ಚಲೋ ಪ್ರತಿಭಟನೆ: 20 ಸಾವಿರ ರೈತರು ರಾಜಧಾನಿ ಪ್ರವೇಶಿಸುವ ಸಾಧ್ಯತೆ

10:26 AM Feb 12, 2024 IST | Bcsuddi
Advertisement

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ವಿವಿಧ ರೈತ ಸಂಘಟನೆಗಳು ಫೆ.13ರಂದು "ದಿಲ್ಲಿ ಚಲೋ"ಗೆ ಕರೆ ನೀಡಿವೆ.

Advertisement

ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈ ಪ್ರತಿಭಟನೆಗೆ 200 ರೈತ ಸಂಘಟನೆಗಳು ಬೆಂಬಲ ನೀಡಿದ್ದು ಕನಿಷ್ಠ 20 ಸಾವಿರ ರೈತರು ದೆಹಲಿ ಪ್ರವೇಶಿಸುವ ಯತ್ನ ಮಾಡಬಹುದು ಎಂಬ ಗುಪ್ತಚರ ಇಲಾಖೆ ಅಂದಾಜಿಸಿದೆ.

ಎರಡೂ ಗಡಿಗಳಲ್ಲಿ ಕ್ರೇನ್‌ ಮತ್ತು ಕಂಟೇನರ್‌ಗಳನ್ನು ತಂದಿಟ್ಟಿದ್ದು, ರೈತರು ದೆಹಲಿ ಪ್ರವೇಶ ಮಾಡಲು ಯತ್ನಿಸಿದರೆ ಹೆದ್ದಾರಿ ಬಂದ್ ಮಾಡಲು ದೆಹಲಿ ಪೊಲೀಸರು ಯೋಜಿಸಿದ್ದಾರೆ. ಅಲ್ಲದೆ ಯಾವುದೇ ಅನಾಹುತಕಾರಿ ಘಟನೆ ತಡೆಯಲು ಗಡಿ ಮತ್ತು ದೆಹಲಿಯ ಆಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

Advertisement
Next Article