For the best experience, open
https://m.bcsuddi.com
on your mobile browser.
Advertisement

ದಿಢೀರ್ ಬಿಗ್‌ಬಾಸ್‌ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್ !

11:08 AM Oct 14, 2024 IST | BC Suddi
ದಿಢೀರ್ ಬಿಗ್‌ಬಾಸ್‌ ನಿರೂಪಣೆಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್
Advertisement

ಸತತ 11 ವರ್ಷಗಳಿಂದ ಕಿಚ್ಚ ಸುದೀಪ್ ಕನ್ನಡದ ಬಿಗ್‌ಬಾಸ್‌ ಕಾರ್ಯಕ್ರಮ ನಿರೂಪಿಸುತ್ತಾ ಬಂದಿದ್ದಾರೆ. ಸುದೀಪ್ಗೆ ಸುದೀಪೇ ಸಾಟಿ ಎನ್ನುವ ಮಟ್ಟಕ್ಕೆ ಸುದೀಪ್ ಈ ಒಂದು ಕಾರ್ಯಕ್ರಮವನ್ನ ಹೆಗಲು ಮೇಲೆ ಹೊತ್ತುಕೊಂಡು ಸರಾಗವಾಗಿ ನಡೆಸಿಕೊಡುತ್ತಾ ಬಂದಿದ್ದಾರೆ. ಆದರೆ ಈಗ ಬಿಗ್‌ಬಾಸ್‌ಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ ಕಿಚ್ಚ ಸುದೀಪ್

ಈ ಬಗ್ಗೆ ಟ್ವೀಟ್ ಮಾಡಿರುವ ಸ್ಯಾಂಡಲ್ವುಡ್ ಸ್ಟಾರ್ ಕಿಚ್ಚ ಸುದೀಪ್. ಬಿಗ್‌ಬಾಸ್‌ 11ನೇ ಸೀಸನ್ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಸುದೀಪ್ ಬಿಗ್ ಬಾಸ್ 11 ಕ್ಕೆ ಉತ್ತಮ ರೆಸ್ಪಾನ್ಸ್ ಕೊಟ್ಟಿರುವುದಕ್ಕೆ ಧನ್ಯವಾದಗಳು.ನನ್ನ ಹಾಗೂ ಶೋ ಮೇಲೆ ನಿಮಗೆಷ್ಟು ಪ್ರೀತಿ ಇದೆ ಎಂಬುದು ಮೊದಲ ವಾರ ಬಂದಿರುವ ಟಿವಿಆರ್ ನಿಂದಲೇ ತಿಳಿಯುತ್ತಿದೆ. 11 ವರ್ಷ ಈ ಪಯಣ ಅದ್ಬುತ. ಇದು ನನ್ನ ಕೊನೆಯ ಸೀಸನ್. ನನ್ನ ನಿರ್ಧಾರವನ್ನು ಚಾನಲ್ ಮತ್ತು ಇಷ್ಟು ವರ್ಷ ಬಿಗ್‌ಬಾಸ್‌ ವೀಕ್ಷಿಸಿದ ಜನರು ಗೌರವಿಸುತ್ತಾರೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

Advertisement
Author Image

Advertisement