ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

‘ದಾಳಿಂಬೆ ಹಣ್ಣಿನ’ ರಾಯಿತಾ ಮಾಡುವ ವಿಧಾನ

09:25 AM Sep 19, 2024 IST | BC Suddi
Advertisement

ಚಪಾತಿ, ಪಲಾವ್, ಪರೋಟ, ಗೀ ರೈಸ್ ಮಾಡಿದಾಗ ತಿನ್ನುವುದಕ್ಕೆ ರಾಯಿತಾ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ದಾಳಿಂಬೆ ಹಣ್ಣು ಬಳಸಿ ಮಾಡುವ ಸುಲಭವಾದ ರಾಯಿತ ಇದೆ. ಮನೆಯಲ್ಲಿ ಮಾಡಿ ನೋಡಿ.

Advertisement

ಬೇಕಾಗುವ ಸಾಮಗ್ರಿಗಳು:

1 ½ ಕಪ್-ಮೊಸರು, ½ ಕಪ್- ದಾಳಿಂಬೆ ಹಣ್ಣಿನ ಬೀಜ, ½ ಟೀ ಸ್ಪೂನ್-ಉಪ್ಪು, ½ ಟೀ ಸ್ಪೂನ್- ಜೀರಿಗೆ ಪುಡಿ, ¼ ಟೀ ಸ್ಪೂನ್-ಕಾಳುಮೆಣಸಿನ ಪುಡಿ, ½ ಟೀ ಸ್ಪೂನ್-ಸಕ್ಕರೆ, ½ ಟೇಬಲ್ ಸ್ಪೂನ್-ಕೊತ್ತಂಬರಿಸೊಪ್ಪು.

ಮಾಡುವ ವಿಧಾನ: ಒಂದು ಬೌಲ್ ಗೆ ದಾಳಿಂಬೆ ಹಣ್ಣಿ ಬೀಜಗಳನ್ನು ಹಾಕಿ. ಇದರಿಂದ 2 ಟೇಬಲ್ ಸ್ಪೂನ್ ದಾಳಿಂಬೆ ಬೀಜಗಳನ್ನು ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ದಾಳಿಂಬೆ ಹಣ್ಣಿನ ಬೀಜವಿರುವ ಬೌಲ್ ಗೆ ಮೊಸರು, ಜೀರಿಗೆ ಪುಡಿ, ಉಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ. ನಂತರ ರುಬ್ಬಿಟ್ಟುಕೊಂಡ ದಾಳಿಂಬೆ ಹಣ್ಣಿನ ರಸ ಸೇರಿಸಿ ಕೊತ್ತಂಬರಿಸೊಪ್ಪು ಹಾಕಿ ಮಿಕ್ಸ್ ಮಾಡಿ. ಇದನ್ನು ಫ್ರಿಡ್ಜ್ ನಲ್ಲಿಟ್ಟು ಕೂಡ ಸರ್ವ್ ಮಾಡಬಹುದು.

 

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ

Advertisement
Next Article