ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ ಕೇಸ್: ಕೊನೆಗೂ ಎಫ್‌ಐಆರ್ ದಾಖಲು

05:58 PM May 28, 2024 IST | Bcsuddi
Advertisement

ಹಾಸನ: ದಸರಾ ಆನೆ ಅರ್ಜುನ ಸಮಾಧಿ ವಿರೂಪ ಆರೋಪ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕೊನೆಗೂ ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

Advertisement

ಸಕಲೇಶಪುರ ಯಸಳೂರು ವಲಯ ಅರಣ್ಯಾಧಿಕಾರಿ ಎಚ್‌ಡಿ ಕೋಟೆಯ ನವೀನ್ ವಿರುದ್ಧ ಕೇಸ್ ದಾಖಲಾಗಿದೆ. ನವೀನ್ ಹಾಗೂ ಇತರರು ತಾವು ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿ ಅರಣ್ಯದೊಳಗೆ ಅತಿಕ್ರಮವಾಗಿ ಪ್ರವೇಶ ಮಾಡಿ ಅರ್ಜುನನ ಸಮಾಧಿಯ ಮಣ್ಣು ಬೆದಿದ್ದಲ್ಲದೆ, ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು.

ಸ್ಮಾರಕ ನಿರ್ಮಾಣಕ್ಕಾಗಿ ದರ್ಶನ್ ಅವರು ಕಲ್ಲು ಕಳುಹಿಸಿದ್ದಾರೆ ಎಂದು ಹೇಳಿ ವಿಡಿಯೋವನ್ನು ಸಹ ಮಾಡಿ ಅಭಿಮಾನಿಗಳು ಹಂಚಿಕೊಂಡಿದ್ದರು. ಆದರೆ ಸರ್ಕಾರದ ಹಾಗೂ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನಿಸಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸಮಾಧಿಯನ್ನು ಬಗೆದು ವಿರೂಪಗೊಳಿಸಲಾಗಿದೆ. ಹಾಗೇ ಜನರಿಂದ ಅನಧಿಕೃತವಾಗಿ ಹಣ ಸುಲಿಗೆ ಮಾಡಲಾಗಿದೆ ಎಂದು ಜನ ಆರೋಪ ಮಾಡಿದ್ದರು. ಹೀಗಾಗಿ ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷೆನ್ 33 ಹಾಗೂ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 25-43ರ ಅಡಿ ಪ್ರಕರಣ ದಾಖಲಿಸಲಾಗಿದೆ.

 

 

Advertisement
Next Article