For the best experience, open
https://m.bcsuddi.com
on your mobile browser.
Advertisement

ತೆಲಂಗಾಣ ಚುನಾವಣೆ: ಅಕ್ರಮವಾಗಿ ಸಾಗಿಸುತ್ತಿದ್ದ7 ಕೋಟಿ ರೂ. ನಗದು ವಶ

01:38 PM Nov 24, 2023 IST | Bcsuddi
ತೆಲಂಗಾಣ ಚುನಾವಣೆ  ಅಕ್ರಮವಾಗಿ ಸಾಗಿಸುತ್ತಿದ್ದ7 ಕೋಟಿ ರೂ  ನಗದು ವಶ
Advertisement

ತೆಲಂಗಾಣ : ತೆಲಂಗಾಣ ವಿಧಾನಸಭೆ ಚುನಾವಣೆಗೆ ಒಂದು ವಾರ ಬಾಕಿ ಇರುವಂತೆಯೇ ಹೈದರಾಬಾದ್ ಪೊಲೀಸರು ಗುರುವಾರ ಗಚಿಬೌಲಿ ಪ್ರದೇಶದಲ್ಲಿ ವಾಹನ ತಪಾಸಣೆ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 5 ಕೋಟಿ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಚುನಾವಣೆ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಎರಡು ಕಾರುಗಳಲ್ಲಿ ನಗದು ಸಾಗಿಸುತ್ತಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಮೊತ್ತವನ್ನು ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಮತ್ತೊಂದು ಘಟನೆಯಲ್ಲಿ ಗುರುವಾರ ಹೈದರಾಬಾದ್‌ನ ಹಯಾತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಾದ ಅಕ್ಟೋಬರ್ 9 ರಿಂದ ಇದುವರೆಗೆ ಜಾರಿ ಸಂಸ್ಥೆಗಳು 657 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ನಗದು, ಅಮೂಲ್ಯ ಲೋಹಗಳು, ಮದ್ಯ, ಡ್ರಗ್ಸ್ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿವೆ.

Advertisement

Author Image

Advertisement