ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತುಳಸಿ ಟೀ ಯ ಆರೋಗ್ಯ ಪ್ರಯೋಜನಗಳು..!

08:59 AM Oct 02, 2024 IST | BC Suddi
Advertisement

ಹಿಂದೂಗಳಾಗಿರುವ ಪ್ರತಿಯೊಬ್ಬರ ಮನೆಯೆದುರೂ ತುಳಸಿ ಗಿಡವಿರುತ್ತದೆ. ಪವಿತ್ರ ಗಿಡವಾಗಿರುವ ತುಳಸಿಗಾಗಿ ವಿಶೇಷವಾಗಿ ತುಳಸಿ ಪೂಜೆಯೇ ನಡೆಯುತ್ತದೆ.ಪವಿತ್ರ ಎಂದು ಭಾರತದಲ್ಲಿ ಪರಿಗಣಿಸಲ್ಪಟ್ಟಿರುವ ತುಳಸಿ ಗಿಡದ ಎಲೆ, ಹೂವು, ಬೇರು ಎಲ್ಲವೂ ಒಂದಲ್ಲಾ ಒಂದು ಔಷಧೀಯ ಗುಣಗಳನ್ನು ಹೊಂದಿವೆ. ಈ ಗುಣಗಳನ್ನು ಸಾವಿರಾರು ವರ್ಷಗಳಿಂದ ಆಯುರ್ವೇದ ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಬಳಸುತ್ತಾ ಬಂದಿದೆ.

Advertisement

ಆರ್ಯುವೇದ ಪದ್ಧತಿಯಲ್ಲಿಯೂ ತುಳಸಿಗೆ ಹೆಚ್ಚಿನ ಪರಿಗಣನೆಯಿದೆ. ಹಲವು ಆರೋಗ್ಯ ಸಮಸ್ಯೆಗಳಿಗೆ ತುಳಸಿ ಸೇವನೆ ಪರಿಹಾರವಾಗಿದ. ಆಯುರ್ವೇದಿಕ್ ಔಷಧಿಯಲ್ಲಿ ತುಳಸಿಯನ್ನು ಕಡ್ಡಾಯವಾಗಿ ಬಳಸಲಾಗುತ್ತದೆ. ಸೋಂಕುಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಧುಮೇಹ ನಿಯಂತ್ರಣಕ್ಕೆ ತುಳಸಿಯ ಬಳಕೆ ಅತ್ಯುತ್ತಮವಾಗಿದೆ, ಜ್ವರ, ಕೆಮ್ಮು, ನೆಗಡಿ, ಶೀತ ಮೊದಲಾದ ಸಮಸ್ಯೆಗಳಿಗೆ ತುಳಸಿ ಚಹಾ ಸೇವನೆ ಅತ್ಯುತ್ತಮ ಪರಿಹಾರವಾಗಿದೆ.

ಬಿಸಿ ಬಿಸಿ ತುಳಸಿ ಚಹಾ (Tea) ಕುಡಿಯುವುದರಿಂದ ಈ ಸಮಸ್ಯೆಗಳು ಫಟಾಫಟ್ ಕಡಿಮೆಯಾಗುತ್ತವೆ. ನಿಯಮಿತವಾಗಿ ತುಳಸಿ ಚಹಾ ಕುಡಿಯುತ್ತಿರುವುದರಿಂದ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸುಲಭವಾಗಿ ಜ್ವರ, ಶೀತ ಕಾಣಿಸಿಕೊಳ್ಳುವುದಿಲ್ಲ. ತುಳಸಿಯಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್‌ಗಳು ಮತ್ತು ಬೀಟಾ ಕ್ಯಾರೋಟಿನ್ ಅಂಶವಿರುವುದರಿಂದ ಇದು ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸಕ್ಕರೆ ಬೆರೆಸದೇ ತಯಾರಿಸಿದ ತುಳಸಿ ಚಹಾವನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಈ ಮೂಲಕ ಮಧುಮೇಹ ಆವರಿಸುವ ಸಾಧ್ಯತೆಯನ್ನು ತಡವಾಗಿಸುತ್ತದೆ.

ಅಲ್ಲದೇ ಇದರಲ್ಲಿರುವ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು (polyunsaturated fatty acids) ರಕ್ತದಲ್ಲಿ ಸಕ್ಕರೆಯ ಮಟ್ಟ ಆರೋಗ್ಯಕರವಾಗಿರಲು ನೆರವಾಗುತ್ತವೆ. ತುಳಸಿ ಚಹಾವನ್ನು ಪ್ರತಿದಿನ ಕುಡಿಯುವುದು ಸಂಧಿವಾತದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿಯಲ್ಲಿರುವ ತೈಲದ ಅಂಶ ಬ್ಯಾಕ್ಟೀರಿಯಾ ವಿರೋಧಿಯಾಗಿದೆ ಮತ್ತು ಇದು ಶ್ವಾಸಕೋಶದ ಸೋಂಕನ್ನು ಗುಣಪಡಿಸುತ್ತದೆ.

ಕ್ಷಯರೋಗ ಮತ್ತು ಧೂಮಪಾನದಿಂದ ಶ್ವಾಸಕೋಶಕ್ಕೆ ಉಂಟಾಗುವ ಹಾನಿಯನ್ನು ನಿಲ್ಲಿಸಲು ತುಳಸಿ ಸಹಾಯ ಮಾಡುತ್ತದೆ ತುಳಸಿ ಚಹಾವು ಜ್ವರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವ ಅತ್ಯುತ್ತಮ ಪರಿಹಾರಗಳಲ್ಲಿ ಒಂದಾಗಿದೆ, ಏಕೆಂದರೆ ಇದೊಂದು ನೈಸರ್ಗಿಕ ನೋವು ನಿವಾರಕವಾಗಿದ್ದು ಅದು ಜ್ವರ ಶೀತ ಮೊದಲಾದವುಗಳಿಗೆ ಕಾರಣವಾದ ವೈರಸ್ಸುಗಳ ವಿರುದ್ದ ಹೋರಾಡುವ ಮೂಲಕ ಸೋಂಕನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡುತ್ತದೆ. ತ್ವಚೆಗೆ ಎದುರಾಗುವ ವೃದ್ದಾಪ್ಯದ ಲಕ್ಷಣಗಳನ್ನು ತಡವಾಗಿಸುತ್ತದೆವಯಸ್ಸಾಗುತ್ತಿದ್ದಂತೆಯೇ ಚರ್ಮದ ಸೆಳೆತವೂ ಕೊಂಚ ಕುಗ್ಗುವ ಕಾರಣ ಚರ್ಮದಲ್ಲಿ ನೆರಿಗೆಗಳು ಮೂಡ ತೊಡಗುತ್ತವೆ. ಹಾಗಾಗಿ ಈ ನೆರಿಗೆಗಳು ಮೂಡುವ ನೈಸರ್ಗಿಕ ಪ್ರಕ್ರಿಯೆ ತಡವಾದಷ್ಟೂ ತಾರುಣ್ಯವನ್ನು ಉಳಿಸಿಕೊಳ್ಳಲು ಸಾಧ್ಯ.

Advertisement
Next Article