ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತುರ್ತು ಸಂದರ್ಭದಲ್ಲಿ ಸಾರ್ವಜನಿಕರನ್ನು ಎಚ್ಚರಿಸಲು ಮೊಬೈಲ್ ಗೆ ಸಂದೇಶ ರವಾನೆ – ಪ್ರಾಯೋಗಿಕ ಕಾರ್ಯಾಚರಣೆ ಆರಂಭ

04:25 PM Sep 16, 2023 IST | Bcsuddi
Advertisement

ದೂರಸಂಪರ್ಕ ಇಲಾಖೆ ಗ್ರಾಹಕರನ್ನು ಎಚ್ಚರಿಸುವ ಇನ್ನೊಂದು ರಾಷ್ಟ್ರೀಯ ಸಂದೇಶವನ್ನು ಅಳವಡಿಸಲು ಮುಂದಾಗಿದೆ. ಈ ಬಾರಿ ಸಾರ್ವಜನಿಕರ ಸುರಕ್ಷತೆ ಮತ್ತು ತುರ್ತು ಸಂದರ್ಭದಲ್ಲಿ ಎಚ್ಚರಿಕೆ ನೀಡುವ ಗುರಿಯನ್ನು ಹೊಂದಲಾಗಿದೆ. ಶುಕ್ರವಾರ ಈ ಕುರಿತು ಎಮರ್ಜೆನ್ಸಿ ಅಲರ್ಟ್ ಪರೀಕ್ಷೆ ನಡೆಸಲಾಯಿತು.

Advertisement

ಸಂದೇಶ ರವಾನೆ

ಎಮರ್ಜೆನ್ಸಿ ಅಲರ್ಟ್ ಸಂದೇಶವನ್ನು ವೋಡಾಫೋನ್ ಐಡಿಯಾ, ಜಿಯೋ, ಏರ್ ಟೆಲ್ ಮತ್ತು ಬಿಸೆನ್ನೆಲ್ ಗ್ರಾಹಕರಿಗೆ ಕಳುಹಿಸಲಾಗಿದೆ. ಈ ಸಂದೇಶವನ್ನು ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಗ್ರಾಹಕರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಅಥಾರಿಟಿ (NDMA ) ಸೂಚನೆ ಮೇರೆಗೆ ಈ ತುರ್ತು ಪರಿಸ್ಥಿತಿ ಎಚ್ಚರಿಕೆಯ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಲಾಗಿದೆ.

ಈ ಸಂದೇಶ ಬಂದರೆ ನೀವು ಯಾವುದೇ ಕ್ರಮ ಕೈಗೊಳ್ಳಬೇಕಾಗಿಲ್ಲ. ಪ್ರಾಯೋಗಿಕವಾಗಿ ಇದನ್ನು ಕಳುಹಿಸಲಾಗಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ತುರ್ತು ಪರಿಸ್ಥಿತಿಯಲ್ಲಿ ಎಚ್ಚರಿಕೆ ಮೂಡಿಸುವುದು ಈ ಕಾರ್ಯಾಚರಣೆಯ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮೊಬೈಲ್ ಗೆ ಈ ಸಂದೇಶ ರವಾನೆಯಾಗಿದೆ. ಸಂದೇಶ ಸ್ವೀಕರಿಸಿದಾಗ ಫೋನ್ ವೈಬ್ರೇಶನ್ ಆಗುವ ಜೊತೆಗೆ ಎಚ್ಚರಿಸುವ ರೀತಿಯ ಶಬ್ದ ಹೊರಡಿಸಲಿದೆ ಎಂದು ಮೂಲಗಳು ತಿಳಿಸಿವೆ.

Advertisement
Next Article