ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತಿರುವಂತಪುರದ ಶ್ರೀ ಅನಂತಪದ್ಮನಾಭ ದೇವಳದಲ್ಲಿ ಕಳ್ಳತನ

12:24 PM Oct 20, 2024 IST | BC Suddi
Advertisement

ತಿರುವನಂತಪುರ : ಕೋಟಿಗಟ್ಟಲೆ ಸಂಪತ್ತು ಇರುವ, ಬಿಗು ಭದ್ರತೆಯ ತಿರುವಂತಪುರದ ಶ್ರೀ ಅನಂತಪದ್ಮನಾಭ ದೇವಳದಲ್ಲಿ ಕಳೆದ ವಾರ ಸಂಭವಿಸಿದ ಕಳ್ಳತನ ಬೆಚ್ಚಿಬೀಳಿಸಿದೆ. ದೇವಳದ ಸಂಪತ್ತಿಗೆ ಐದು ಹಂತಗಳ ಸರ್ಪಗಾವಲು ಇದೆ. ಇದನ್ನು ಬೇಧಿಸಿ ಕಳ್ಳರು ಒಳ ನುಗ್ಗಿರುವುದು ಆಶ್ಚರ್ಯವುಂಟು ಮಾಡಿದೆ. ಪೂಜೆಗೆ ಬಳಸುವ ಒಂದು ಕಂಚಿನ ಉರುಳಿ (ಪಾತ್ರೆ) ಬಿಟ್ಟರೆ ಬೇರೇನನ್ನೂ ಒಯ್ಯಲು ಕಳ್ಳರಿಂದ ಸಾಧ್ಯವಾಗಿಲ್ಲ.

Advertisement

ಈ ಕಳ್ಳರನ್ನು ಕೇರಳ ಪೊಲೀಸರು ಹರ್ಯಾಣದಿಂದ ಬಂಧಿಸಿದ್ದಾರೆ. ಕಳ್ಳರ ಪೈಕಿ ಮೂವರು ಮಹಿಳೆಯರು. ಆದರೆ ಈ ಕಳ್ಳತನ ಪ್ರಕರಣ ನೆಲಮಹಡಿಯಲ್ಲಿರುವ ಐದು ರಹಸ್ಯ ಕೋಣೆಗಳಲ್ಲಿ 1.5 ಲಕ್ಷ ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಹೊಂದಿರುವ ದೇವಸ್ಥಾನದ ಭದ್ರತಾ ವ್ಯವಸ್ಥೆಯಲ್ಲಿರುವ ಹುಳುಕುಗಳನ್ನು ಬಯಲುಗೊಳಿಸಿದೆ.

ಕಳೆದ ಅ.13ರಂದು ದೇವಳದ ಹೈ ಸೆಕ್ಯುರಿಟಿ ಏರಿಯಾದಲ್ಲೇ ಕಳ್ಳತನ ನಡೆದಿದೆ. ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಈ ಕೃತ್ಯದಲ್ಲಿ ಶಾಮೀಲಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸೆರೆಯಾಗಿರುವ ಪುರುಷನನ್ನು ಆಸ್ಟ್ರೇಲಿಯದಲ್ಲಿ ನೆಲೆಸಿರುವ ಭಾರತೀಯ ಮೂಲದ ಜಗನೇಶ್ ಎಂದು ಗುರುತಿಸಲಾಗಿದೆ.

ಶ್ರೀ ಅನಂತಪದ್ಮನಾಭ ಸ್ವಾಮಿ ದೇವಳದ ರಹಸ್ಯ ಕೊಠಡಿಗಳಲ್ಲಿ ಭಾರಿ ಪ್ರಮಾಣದ ಸಂಪತ್ತು ಇರುವ ವಿಚಾರ ಬಯಲಾದ ಬಳಿಕ ಕ್ಷೇತ್ರಕ್ಕೆ ರಾಜ್ಯ ಪೊಲೀಸರ ಜೊತೆಗೆ ಕೇಂದ್ರೀಯ ಪಡೆಗಳ ಭದ್ರತಾ ವ್ಯವಸ್ಥೆ ಮಾಡಲಾಗಿದೆ. 2011ರಿಂದೀಚೆಗೆ ದಿನದ 24 ತಾಸು 5 ಟಯರ್‌ಗಳ ಭದ್ರತಾ ವ್ಯವಸ್ಥೆಯಿದೆ. ಇಂಥ ಸರ್ಪಗಾವಲನ್ನು ಬೇಧಿಸಿರುವುದು ಆಶ್ಚರ್ಯವುಂಟು ಮಾಡಿದ

Advertisement
Next Article