ತಿಂಗಳ ರಜೆ ಮುಂದೂಡಲು ಮಾತ್ರೆ ತೆಗೆದುಕೊಳ್ಳುವ ಅಭ್ಯಾಸ ಇದ್ರೆ ಈ ಸುದ್ದಿ ಓದಿ.!
ಸಮಾರಂಭ ಎಂಬ ಕಾರಣಕ್ಕೆ ತಿಂಗಳ ರಜೆಯನ್ನು ಮಾತ್ರೆ ತೆಗೆದುಕೊಂಡು ಮುಂದೆ ಹಾಕುವ ಅಭ್ಯಾಸ ನಿಮಗಿದೆಯೇ. ಇದರಿಂದ ದೇಹದ ಆರೋಗ್ಯದ ಮೇಲೆ ಎಷ್ಟೆಲ್ಲಾ ಅಡ್ಡಪರಿಣಾಮಗಳಾಗುತ್ತವೆ ಎಂಬುದು ನಿಮಗೆ ತಿಳಿದಿದೆಯೇ.
ಮೆಡಿಕಲ್ ಗಳಲ್ಲಿ ಈ ಮಾತ್ರೆಗಳು ಸುಲಭವಾಗಿ ಲಭ್ಯವಾಗುವುದು ಹೌದಾದರೂ ಪ್ರತಿ ತಿಂಗಳನ್ನು ಇದನ್ನೇ ಅವಲಂಬಿಸುವುದು ಒಳ್ಳೆಯದಲ್ಲ. ಅನಿವಾರ್ಯವಾದಾಗ ಮಾತ್ರ ಈ ಮಾತ್ರೆಗಳ ಮೊರೆ ಹೋಗಿ.
ಇದಕ್ಕಾಗಿ ನೀವು ಜನನ ನಿಯಂತ್ರಣ ಮಾತ್ರೆಗಳನ್ನು ಸೇವಿಸುವುದರಿಂದ ಸಂತಾನೋತ್ಪತ್ರಿ ಹಾರ್ಮೋನ್ ಗಳು ಸರಿಯಾಗಿ ಕೆಲಸ ನಿರ್ವಹಿಸದಿರಬಹುದು. ಮತ್ತು ತಿಂಗಳ ರಜೆ ಮುಂದೆ ಹೋಗಿ ಆಗುವುದರಿಂದ ರಕ್ತ ಸ್ರಾವವೂ ಹೆಚ್ಚಿರಬಹುದು. ವಿಪರೀತ ಹೊಟ್ಟೆ ಹಾಗೂ ಬೆನ್ನು ನೋವು ಕಾಣಿಸಿಕೊಳ್ಳಬಹುದು.
ಕೆಲವರಿಗೆ ತಿಂಗಳ ರಜೆಯ ಅವಧಿಯಲ್ಲಿ ವಾಂತಿ, ತಲೆಸುತ್ತುವುದು ಅಥವಾ ತಲೆ ನೋವಿನ ಲಕ್ಷಣಗಳು ಕಂಡು ಬಂದಾವು. ಹಾರ್ಮೋನ್ ಬದಲಾವಣೆಯೂ ಇದಕ್ಕೆ ಕಾರಣವಿರಬಹುದು. ಸೂಕ್ಷ್ಮ ದೇಹಿಗಳು ಈ ಮಾತ್ರೆ ಸೇವಿಸುವುದರಿಂದ ಮುಖದಲ್ಲಿ ಮೊಡವೆಗಳು ಕಾಣಿಸಿಕೊಂಡಾವು, ಹಾಗಾಗಿ ಈ ಮಾತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿರದೆ ತಿಂಗಳ ರಜೆಯನ್ನು ಸಾಮಾನ್ಯ ಅವಧಿಯಲ್ಲೇ ಆಗಲು ಬಿಡಿ.