For the best experience, open
https://m.bcsuddi.com
on your mobile browser.
Advertisement

ತರಕಾರಿ ಮುಟ್ಟಿದ್ರೆ ಶಾಕ್.!  

07:17 AM May 27, 2024 IST | Bcsuddi
ತರಕಾರಿ ಮುಟ್ಟಿದ್ರೆ ಶಾಕ್    
Advertisement

ಬೆಂಗಳೂರು: ತರಕಾರಿ ಮುಟ್ಟಿದ್ರೆ ಶಾಕ್ ಹೇಗೆ ಅಂತೀರ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿ ತರ ದಿನೇ ದಿನೇ ಹೆಚ್ಚಳವಾಗುತ್ತಿದೆ.

ಬಿಸಿಲು, ಮುಂಗಾರುಪೂರ್ವ ಮಳೆಯ ಪರಿಣಾಮ ಸಗಟು ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ದೀರ್ಘಾವಧಿಗೆ ತರಕಾರಿ ದರ ಹೆಚ್ಚಳ ಆಗಿರುವುದು ದಿನಬಳಕೆ ಮಾತ್ರವಲ್ಲದೆ, ಮದುವೆ, ಗೃಹಪ್ರವೇಶದಂತಹ ಕಾರ್ಯಕ್ರಮಗಳ ಖರ್ಚು ವೆಚ್ಚವನ್ನು ಹೆಚ್ಚಳ ಮಾಡಲಾಗಿದೆ. ಹೋಟೆಲ್, ಕೇಟರಿಂಗ್ ಗಳ ಮೇಲೆಯೂ ತರಕಾರಿ ದರ ಹೆಚ್ಚಳ ಪರಿಣಾಮ ಬೀರಿದೆ.

Advertisement

ಬೀನ್ಸ್ ದರ ಕೆಜಿಗೆ 250 ರೂ., ಕ್ಯಾರೆಟ್ 100 ರೂ., ಕ್ಯಾಪ್ಸಿಕಂ 90 ರೂ., ಬದನೆಕಾಯಿ 85 ರೂ. ವರೆಗೆ ಮಾರಾಟವಾಗುತ್ತಿದ್ದು, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಬೆಂಗಳೂರಿನ ಪ್ರಮುಖ ಸಗಟು ಮಾರುಕಟ್ಟೆಗಳಾದ ಕೆಆರ್ ಮಾರುಕಟ್ಟೆ, ಯಶವಂತಪುರ, ಬಿನ್ನಿ ಮಿಲ್, ಕಲಾಸಿಪಾಳ್ಯ ಮೊದಲಾದ ತರಕಾರಿ ಮಾರುಕಟ್ಟೆಗಳಿಗೆ ಬರುವ ತರಕಾರಿ ಪ್ರಮಾಣದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವಾರ ಸುರಿದ ಮಳೆಗೆ ತರಕಾರಿಗಳು ಹಾನಿಯಾಗಿದ್ದು, ಬೆಲೆ ಏರಿಕೆ ಮುಂದುವರೆದಿದೆ.

Tags :
Author Image

Advertisement