ಡೈವರ್ಸ್ ಹೆಚ್ಚುತ್ತಿದೆ ಏಕೆ, ಇದಕ್ಕೆ ಪರಿಹಾರವೇನು.?
ಮದುವೆ ಎಂಬುದು ಎರಡು ಮನಸ್ಸುಗಳಿಗಷ್ಟೇ ಸೀಮಿತವಲ್ಲ, ಅದು ಎರಡು ಕುಟುಂಬಗಳ ಅನುಬಂಧ ಎಂಬ ಮನೋಭಾವ ಗಂಡು-ಹೆಣ್ಣಲ್ಲಿ ಬರಬೇಕು.
ಆದರೆ, ಈಚೆಗೆ ಇಂತಹ ಮನಸ್ಥಿತಿಗಳ ಕೊರತೆ ಹೆಚ್ಚುತ್ತಿರುವ ಕಾರಣಕ್ಕೆ ಕುಟುಂಬದಲ್ಲಿ ವಿರಸ ಉಂಟಾಗಿ ವಿಚ್ಛೇದನ ಪ್ರಕರಣಗಳು ಕೋರ್ಟ್ ಅಂಗಳಕ್ಕೆ ಬರುತ್ತಿವೆ.
ಹೆಣ್ಣು ಆರ್ಥಿಕವಾಗಿ ಸಬಲತೆ ಸಾಧಿಸುತ್ತಿರುವುದು ಡೈವರ್ಸ್ ಹೆಚ್ಚಾಗಲು ಕಾರಣ ಎಂಬುದು ಮೇಲ್ನೋಟಕ್ಕೆ ಕಂಡರೂ ಅದು ಪೂರ್ಣ ಸತ್ಯವಲ್ಲ.
ಹೆಣ್ಣಿನ ಮನಸ್ಸು, ಅವಳ ಮೇಲೆ ಇರುವ ಒತ್ತಡ ಅರಿತುಕೊಳ್ಳುವ ಗುಣ ಗಂಡ ಮತ್ತು ಆತನ ಕುಟುಂಬದ ಸದಸ್ಯರಲ್ಲಿ ಆಗಬೇಕಿದೆ. ಇಲ್ಲಿ ಗಂಡು ಬದಲಾಗಬೇಕಾದ ಅಗತ್ಯತೆ ಇದೆ. ಹೆಣ್ಣು ಕೂಡ ಮದುವೆ ಎಂಬುದು ಪವಿತ್ರ ಬಂಧ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಎರಡು ಮನಸ್ಸು, ಎರಡು ಕುಟುಂಬ ಈ ಸತ್ಯ ಅರಿತುಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳನ್ನು ವಿಜೃಂಭಿಸದಂತೆ ಎಚ್ಚರವಹಿಸಬೇಕು.
ವಿಷಯ ಕುರಿತು ಮಹಿಳಾ ಪರ ಕಾನೂನು ಹೋರಾಟಗಾರ್ತಿ, ಹಿರಿಯ ನ್ಯಾಯವಾದಿ ಡಿ.ಕೆ.ಶೀಲಾ ಬಿಸಿಸುದ್ದಿ ಜೊತೆ ಅನೇಕ ವಿಷಯ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ Bcsuddi.com ಯೂಟ್ಯೂಬ್ ಚಾನಲ್ ನೋಡಿ.
*ಚಳ್ಳಕೆರೆ ಬಸವರಾಜ್*
ಸಂಪಾದಕ
ಮೊ.ನಂ: 9916881352