ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

'ಡೀಪ್ ಫೇಕ್' ವಿಡಿಯೋಗೆ ಕಡಿವಾಣ - ಕಠಿಣ 'ಐಟಿ ನಿಯಮ' ಜಾರಿಗೆ: ಕೇಂದ್ರ ಸಚಿವ

05:24 PM Jan 16, 2024 IST | Bcsuddi
Advertisement

ಬೆಂಗಳೂರು: 'ಡೀಪ್ ಫೇಕ್' ವಿಡಿಯೋಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, 7-8 ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಕಠಿಣ ಐಟಿ ನಿಯಮ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Advertisement

ಮುಂದಿನ ಏಳೆಂಟು ದಿನಗಳಲ್ಲಿ ತಿದ್ದುಪಡಿ ಮಾಡಿರುವ ಐಟಿ ನಿಯಮಗಳನ್ನು ಸರ್ಕಾರ ಹೊರಡಿಸಲಿದೆ. AI ಬಳಕೆಯ ಮೂಲಕ ಸೃಷ್ಟಿಸಲಾಗುವ ಡೀಪ್‌ಫೇಕ್‌ಗಳಿಂದ ಭಾರತೀಯ ಬಳಕೆದಾರರ ಸುರಕ್ಷತೆ ತಪ್ಪು, ಮಾಹಿತಿ ರವಾನೆ ಜೊತೆಗೆ ನಂಬಿಕೆಗೆ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ನಾವು ಎಲ್ಲಾ ಮಧ್ಯವರ್ತಿಗಳೊಂದಿಗೆ ಎರಡು ಸುತ್ತಿನ ಡಿಜಿಟಲ್ ಇಂಡಿಯಾ ಮಾತುಕತೆ ನಡೆಸಿದ್ದೇವೆ. ಪ್ರಸ್ತುತ ನಿಯಮಗಳ ಬಗ್ಗೆ ನಾವು ಅವರ ಗಮನ ಸೆಳೆದಿದ್ದೇವೆ. ಹೊಸದಾಗಿ ತಿದ್ದುಪಡಿ ಮಾಡಿದ ನಿಯಮಗಳನ್ನು ನಾವು ಅವರಿಗೆ ಸೂಚಿಸುತ್ತೇವೆ ” ಎಂದು ಸಚಿವರು ಇದೇ ವೇಳೆ ಹೇಳಿದ್ದಾರೆ

ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ನಟ ನಟಿಯರ ಅಶ್ಲೀಲ ವಿಡಿಯೋ ಎಡಿಟ್ ಮಾಡುತ್ತಿರುವ ಹಲವು ಪ್ರಕರಗಳು ವರದಿಯಾದ ಹಿನ್ನೆಲೆ ಸರ್ಕಾರ ಕಠಿಣ ನಿಯಮ ಜಾರಿಗೆ ಸಿದ್ದತೆ ನಡೆಸಿದೆ.

Advertisement
Next Article