For the best experience, open
https://m.bcsuddi.com
on your mobile browser.
Advertisement

ಡಿ.24ಕ್ಕೆ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಮದುವೆ

10:36 AM Dec 22, 2023 IST | Bcsuddi
ಡಿ 24ಕ್ಕೆ ಸಲ್ಮಾನ್ ಖಾನ್ ಕಿರಿಯ ಸಹೋದರ ಅರ್ಬಾಜ್ ಮದುವೆ
Advertisement

ಮುಂಬೈ:ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ ಅರ್ಬಾಜ್ ಖಾನ್ ಮದುವೆ ವಿಚಾರ ಬಾಲಿವುಡ್ ನಲ್ಲಿ ಈಗ ಸಖತ್ತ್ ಸದ್ದು ಮಾಡ್ತ ಇದೆ.

ಇದೇ ಬರುವ ಡಿಸೆಂಬರ್ 24ರಂದು ಈ ಮದುವೆ ನಡೆಯಲಿದೆ. ಮಲೈಕಾ ಅರೋರಾ ಜೊತೆ ಅರ್ಬಾಜ್ ಅವರು 1998ರಲ್ಲಿ ಮದುವೆ ಆಗಿದ್ದರು. ನಂತರ ಇಬ್ಬರೂ ಡಿವೋರ್ಸ್ ಪಡೆದುಕೊಂಡು ದೂರವಾದರು.

ಅರ್ಬಾಜ್ ಜೊತೆಗೆ ಮಲೈಕಾ 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದು ಅವರಿಗೆ ಒಬ್ಬ ಮಗ ಕೂಡ ಇದ್ದಾನೆ.ನಂತರ ಅರ್ಬಾಜ್ ರೂಪದರ್ಶಿ ಜಾರ್ಜಿಯಾ ಜೊತೆ ಡೇಟ್ ಮಾಡುತ್ತಿದ್ದರು. ಆ ಸಂಬಂಧವೂ ಮುರಿದು ಬಿದ್ದಿದೆ.

Advertisement

ಆದ್ರೆ ಇದೀಗ ಅರ್ಬಾಜ್ ಖಾನ್ ಮೇಕಪ್ ಕಲಾವಿದೆ ಶುರಾ ಖಾನ್   ಜೊತೆ ಹೆಜ್ಜೆ ಇಡಲಿದ್ದಾರೆ ಅನ್ನುವ ಮಾಹಿತಿ ಬಾಲಿವುಡ್ ಅಂಗಳದಿಂದ ಹೊರಬಿದ್ದಿದೆ.

ಮುಂಬೈನಲ್ಲಿ ನಡೆಯಲಿರುವ ಈ ಮದುವೆಗೆ ಕುಟುಂಬದ ಸದಸ್ಯರು ಮತ್ತು ಆತ್ಮೀಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

Author Image

Advertisement