ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಡಿ. 13ರ ಒಳಗಾಗಿ ಸಂಸತ್​​ ಭವನದ ಮೇಲೆ ದಾಳಿ ಮಾಡ್ತೀವಿ -ಖಲಿಸ್ತಾನಿ ಉಗ್ರ ಬೆದರಿಕೆ

11:28 AM Dec 06, 2023 IST | Bcsuddi
Advertisement

ನವದೆಹಲಿ: "ಡಿಸೆಂಬರ್ 13 ರೊಳಗೆ ನಾವು ಸಂಸತ್ ಭವನದ ಮೇಲೆ ದಾಳಿ ಮಾಡುತ್ತೇವೆ "ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೊಂದು ಬೆದರಿಕೆ ವಿಡಿಯೋ ಬಿಡುಗಡೆ ಮಾಡಿದ್ದಾನೆ. 2021 ಡಿಸೆಂಬರ್ 13 ರಂದು ಪಾರ್ಲಿಮೆಂಟ್​ ಮೇಲೆ ಉಗ್ರರು ದಾಳಿ ನಡೆಸಿದ್ದರು, ಮುಂಬರುವ 13ಕ್ಕೆ 22 ವರ್ಷ ತುಂಬುತ್ತಿದೆ.

Advertisement

“ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ” ಎಂದು ಅಡಿಬರಹ ಹಾಕಿರುವ ವಿಡಿಯೋದಲ್ಲಿ 2021ರ ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಜಲ್ ಗುರು ಜೊತೆಗಿನ ಪೋಸ್ಟರ್​ ಜೊತೆಗೆ ಉಗ್ರ ಗುರುಪತ್ವಂತ್ ಸಿಂಗ್ ಕಾಣಿಸಿಕೊಂಡಿದಾನೆ.

ಭಾರತದ ಏಜೆನ್ಸಿಗಳು ನನ್ನ ಹತ್ಯೆಗೆ ಯತ್ನಿಸಿದ ಸತತ ಪ್ರಯತ್ನ ವಿಫಲವಾಗಿದೆ. ನನ್ನ ವಿರುದ್ಧದ ಸಂಚಿಗೆ ಪ್ರತಿಕ್ರಿಯಿಸುವುದಾಗಿ ಸವಾಲು ಹಾಕಿದ್ದು, ನಾವು ಡಿಸೆಂಬರ್ 13ರ ಒಳಗಾಗಿ ಪಾರ್ಲಿಮೆಂಟ್​ ಮೇಲೆ ದಾಳಿ ಮಾಡುತ್ತೇವೆ ಎಂದಿದ್ದಾನೆ.

ಸದ್ಯ ಸಂಸತ್​ನಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನವು ಡಿಸೆಂಬರ್ 22ರವರೆಗೆ ನಡೆಯಲಿದೆ.

Advertisement
Next Article