ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಡಿಸ್ಕೋ ಡ್ಯಾನ್ಸ್, ಭಾಂಗ್ರಾ, ಭರತನಾಟ್ಯ ಮಾಡುತ್ತಿರುವ ಪ್ರಧಾನಿ: ಪಿಎಂ ಮುಜ್ರಾ ಹೇಳಿಕೆಗೆ ಓವೈಸಿ ಕಿಡಿ

11:22 AM May 27, 2024 IST | Bcsuddi
Advertisement

ಬಿಹಾರ: ಪ್ರಧಾನಿ ನರೇಂದ್ರ ಮೋದಿಯವರ ಇಂಡಿಯಾ ಮೈತ್ರಿಕೂಟ ಕುರಿತು ‘ಮುಜ್ರಾ’ ಹೇಳಿಕೆಯ ತೀವ್ರವಾಗಿ ಕಿಡಿಕಾರಿರುವ ಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರಧಾನಿ ಡಿಸ್ಕೋ ಡ್ಯಾನ್ಸ್, ಭಾಂಗ್ರಾ, ಭರತನಾಟ್ಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

Advertisement

ಬಿಹಾರದ ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, "ಇದು ಪ್ರಧಾನಿ ಬಳಸಬೇಕಾದ ಭಾಷೆಯೇ? ನಮಗೆ ಮಾತನಾಡು ಬರುವುದಿಲ್ಲ ಎಂದು ಮೋದಿ ಭಾವಿಸುತ್ತಾರೆಯೇ? ಎಂದು ವಾಗ್ದಾಳಿ ನಡೆಸಿದರು.

"ಸುಮಾರು 2,000 ಚದರ ಕಿಲೋಮೀಟರ್ ಭಾರತೀಯ ಭೂಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ. ಮೋದಿ ಈ ಬಗ್ಗೆ ಏನೂ ಮಾಡಿಲ್ಲ. ಅವರು ಈ ವಿಷಯದಲ್ಲಿ ಡಿಸ್ಕೋ ಡ್ಯಾನ್ಸ್ ಮಾಡುತ್ತಿದ್ದಾರೆಯೇ " ಎಂದು ಓವೈಸಿ ಪ್ರಶ್ನಿಸಿದರು.

"ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲು ತರಲಾಯಿತು ಈ ವಿಷಯದ ಬಗ್ಗೆ "ಭಾಂಗ್ರಾ" ಮಾಡುತ್ತಲೇ ಇದ್ದರು. ಅಲ್ಲದೆ, ಧರ್ಮ ಸಂಸದ್ (ಹಿಂದೂ ಸಭೆಗಳು) ನಲ್ಲಿ ಮುಸ್ಲಿಮರು, ವಿಶೇಷವಾಗಿ ನಮ್ಮ ತಾಯಿ ಮತ್ತು ಸಹೋದರಿಯರ ಬಗ್ಗೆ ಎಲ್ಲಾ ರೀತಿಯ ಆಕ್ಷೇಪಾರ್ಹ ಹೇಳಿಕೆಗಳನ್ನ ನೀಡಿದರು. ಆದರೆ ಇದೆಲ್ಲಾ ಮೋದಿಗೆ ಭರತನಾಟ್ಯ ಮಾಡುವ ವಿಷಯ" ಅವರು ಆರೋಪಿಸಿದರು.

ಶುಕ್ರವಾರ ಬಿಹಾರದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಇಂಡಿಯಾ ಕೂಟವು ಮುಸ್ಲಿಂ ಮತ ಬ್ಯಾಂಕ್ ಅಡಿಯಾಳಾಗಿದ್ದು, ಅದರ ಮುಂದೆ 'ಮುಜ್ರಾ' (ನೃತ್ಯ) ಮಾಡುತ್ತಿದೆ ಎಂದು ಟೀಕಿಸಿದ್ದರು.

 

Advertisement
Next Article