ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಡಿಪ್ಲೋಮಾ ಪ್ರವೇಶಾತಿ ಪ್ರಕ್ರಿಯೆ ಆರಂಭ.! ಅರ್ಜಿ ಆಹ್ವಾನ

07:08 AM May 10, 2024 IST | Bcsuddi
Advertisement

 

Advertisement

 ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ರಾಜ್ಯದ 30 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 10 ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ 2024-25ನೇ ಸಾಲಿನ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶ ಸ್ಥಾನಗಳನ್ನು ರಾಜ್ಯಮಟ್ಟದ ನಾನ್ ಇಂಟರ್ ಆಕ್ಟೀವ್ ಕೌನ್ಸಿಲಿಂಗ್ ಮೂಲಕ ಭರ್ತಿ ಮಾಡಲು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ವಿದ್ಯಾರ್ಥಿಗಳು ಮೇ.9 ರಿಂದ 21 ರವರೆಗೆ  www.dtek.karnatak.gov.in ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಮೇ.21ರ ಸಂಜೆ 5:30ರ ಒಳಗೆ ಅಗತ್ಯ ಪೂರಕ ದಾಖಲೆಗಳೊಂದಿಗೆ, ಡಿಪ್ಲೋಮಾ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಸಲ್ಲಿಸಿ, ತಂತ್ರಾAಶದಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ದಾಖಲಿಸಿಕೊಂಡು, ಕೋರ್ಸುಗಳ ಆದ್ಯತಾ ಪಟ್ಟಿಯ ಸ್ವೀಕೃತಿ ಪಡೆಯಬೇಕು. ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಮೆರಿಟ್‌ಪಟ್ಟಿಯನ್ನು ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮೂಲಕ ರವಾನಿಸಲಾಗುವುದು ಹಾಗೂ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಮೇ.22 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಮೆರಿಟ್ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದು. ಮೇ.23 ರಂದು ಸಂಜೆ 5:30 ಅಂತಿಮ ಮೆರಿಟ್ ಪಟ್ಟಿ ಪಕ್ರಟಿಸಲಾಗುವುದು. ಮೇ.27 ರಂದು ಸಂಜೆ 6 ಗಂಟೆಯ ನಂತರ ಸೀಟು ಹಂಚಿಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಮೇ.28 ಹಾಗೂ ಮೇ.29 ರಂದು ನಿಗದಿತ ಶುಲ್ಕದೊಂದಿಗೆ ಸಂಬAಧ ಪಟ್ಟ ಕಾಲೇಜಿಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

 

ಆನ್‌ಲೈನ್ ಮೂಲಕ ಸೀಟು ಹಂಚಿಕೆ ಆಗದೆ ಉಳಿದ ಸೀಟುಗಳ ಭರ್ತಿಗಾಗಿ ಮೇ.30 ರಿಂದ ಜೂನ್ 6 ರವರೆಗೆ ಆಯಾ ಕಾಲೇಜು ಪ್ರಾಂಶುಪಾಲರ ಹಂತದಲ್ಲಿಯೇ ರೋಷ್ಠರ ಅನುಗುಣವಾಗಿ ಸೀಟು ಹಂಚಿಕೆ ಮಾಡಲಾಗುವುದು.

 

ಡಿಪ್ಲೋಮಾ ಪ್ರವೇಶ ಪ್ರಕ್ರಿಯೆಗೆ ಸಂಬAಧಿಸಿದ ಎಲ್ಲಾ ಮಾಹಿಗಳು ಹಾಗೂ ಇ-ಪುಸ್ತಕವನ್ನು  www.dtek.karnatak.gov.in  ಅಥವಾ  dtetech.karnataka.gov.in/kartechnical     ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು. ಆಯಾ ಸಂಸ್ಥೆಯ ಸೂಚನಾ ಫಲಕದಲ್ಲಿ ಕೂಡ ಮಾಹಿತಿಗಳನ್ನು ಲಗತ್ತಿಸಲಾಗುತ್ತದೆ ಎಂದು ಚಿತ್ರದುರ್ಗ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Tags :
ಡಿಪ್ಲೋಮಾ ಪ್ರವೇಶಾತಿ ಪ್ರಕ್ರಿಯೆ ಆರಂಭ.! ಅರ್ಜಿ ಆಹ್ವಾನ
Advertisement
Next Article