For the best experience, open
https://m.bcsuddi.com
on your mobile browser.
Advertisement

ಡಾನಾ ಚಂಡಮಾರುತ: ಭಾರೀ ಮಳೆಗೆ 2..80 ಲಕ್ಷ ಎಕರೆ ಪ್ರದೇಶ ಜಲಾವೃತ

01:09 PM Oct 26, 2024 IST | BC Suddi
ಡಾನಾ ಚಂಡಮಾರುತ  ಭಾರೀ ಮಳೆಗೆ 2  80 ಲಕ್ಷ ಎಕರೆ ಪ್ರದೇಶ ಜಲಾವೃತ
Advertisement

ಭುವನೇಶ್ವರ : 'ಡಾನಾ' ಚಂಡಮಾರುತದಿಂದ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 1.75 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಜೊತೆಗೆ, 2.80 ಲಕ್ಷ ಎಕರೆ ಪ್ರದೇಶ ಜಲಾವೃತಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಡಾನಾ ಚಂಡಮಾರುತದಿಂದ ಉಂಟಾಗಿರುವ ಬೆಳೆ ನಷ್ಟದ ಕುರಿತು ಜಂಟಿ ಮೌಲ್ಯಮಾಪನ ನಡೆಸುವಂತೆ ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಕೃಷಿ ಮತ್ತು ರೈತ ಸಬಲೀಕರಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರಬಿಂದ ಪಾಧಿ ಅವರು, ಡಾನಾ ಚಂಡಮಾರುತದಿಂದ ರಾಜ್ಯದಲ್ಲಿ ಸುಮಾರು 1.75 ಲಕ್ಷ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಸುಮಾರು 2.80 ಲಕ್ಷ ಎಕರೆ ಪ್ರದೇಶ ಮುಳುಗಡೆಗೊಂಡಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ' ಎಂದು ಬರೆದುಕೊಂಡಿದ್ದಾರೆ.

Advertisement

ಚಂಡಮಾರುತದ ಹಾನಿ ಕುರಿತು ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಸಿಎಂ ಮೋಹನ್ ಚರಣ್ ಮಾಝಿ ಅವರು 'ಚಂಡಮಾರುತದಿಂದಾಗಿ ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ನಷ್ಟದ ಅಂತಿಮ ಅಂದಾಜಿನ ವಿವರ ವರದಿಯಿಂದ ತಿಳಿದುಬರುತ್ತದೆ. ಅದರ ಆಧಾರದ ಮೇಲೆ ಸರ್ಕಾರವು ರೈತರಿಗೆ ಪರಿಹಾರವನ್ನು ನಿರ್ಧರಿಸುತ್ತದೆ' ಎಂದಿದ್ದರು.

Author Image

Advertisement