For the best experience, open
https://m.bcsuddi.com
on your mobile browser.
Advertisement

ಟ್ರಕ್‌ಗೆ ಕಾರು ಡಿಕ್ಕಿ - ಭೀಕರ ಅಪಘಾತದಲ್ಲಿ ಐವರು ಪೊಲೀಸರು ದುರ್ಮರಣ

03:40 PM Nov 19, 2023 IST | Bcsuddi
ಟ್ರಕ್‌ಗೆ ಕಾರು ಡಿಕ್ಕಿ   ಭೀಕರ ಅಪಘಾತದಲ್ಲಿ ಐವರು ಪೊಲೀಸರು ದುರ್ಮರಣ
Advertisement

ಜೈಪುರ: ಭೀಕರ ರಸ್ತೆ ಅಪಘಾತದಲ್ಲಿ ಐವರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿ ಇಬ್ಬರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಚುರು ಎಂಬಲ್ಲಿ ಭಾನುವಾರ ನಡೆದಿದೆ.

ರಾಜ್ಯ ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಆಗಲಿದ್ದ ಕಾರಣ ಪೊಲೀಸರು ಕಾರಿನಲ್ಲಿ ನಗೌರ್ನಿಂದ ಜುಂಜುನುಗೆ ಕರ್ತವ್ಯಕ್ಕಾಗಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾ ತ ಸಂಭವಿಸಿದೆ ಎಂದು ವರದಿಯಾಗಿದೆ.

ಪೊಲೀಸರ ವಾಹನ ಅತೀ ವೇಗದಿಂದ ಪ್ರಯಾಣಿಸುತ್ತಿತ್ತು ಎನ್ನಲಾಗಿದೆ.ಟ್ರಕ್‌ವೊಂದು ಓವರ್‌ ಟೇಕ್‌ ಮಾಡಿ ಹೋಗಿದೆ. ಮುಂದೆ ಹೋದ ಟ್ರಕ್‌ ಬ್ರೇಕ್‌ ಹಾಕಿದೆ. ಇದರ ಪರಿಣಾಮ ಪೊಲೀಸ್‌ ವಾಹನ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ ಐವರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಮೃತಪಟ್ಟ ಪೊಲೀಸರು ರಾಜಸ್ಥಾನದ ನಾಗೌರ್ ಜಿಲ್ಲೆಯವರೆಂದು ವರದಿ ತಿಳಿದು ಬಂದಿದೆ.

Advertisement

Author Image

Advertisement