For the best experience, open
https://m.bcsuddi.com
on your mobile browser.
Advertisement

ಟೆಲಿಕಾಂ ಕ್ಷೇತ್ರದಲ್ಲಿ BSNL ಹೊಸ ಕ್ರಾಂತಿ : ಸಿಮ್, ನೆಟ್‌ವರ್ಕ್ ಇಲ್ಲದೇ ಕಾಲ್ ಮಾಡ್ಬಹುದು..!

11:02 AM Oct 19, 2024 IST | BC Suddi
ಟೆಲಿಕಾಂ ಕ್ಷೇತ್ರದಲ್ಲಿ bsnl ಹೊಸ ಕ್ರಾಂತಿ   ಸಿಮ್  ನೆಟ್‌ವರ್ಕ್ ಇಲ್ಲದೇ ಕಾಲ್ ಮಾಡ್ಬಹುದು
Advertisement

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಇದೀಗ ಪ್ರತಿ ದಿನ ಪ್ರತಿಸ್ಪರ್ಧಿಗಳಿಗೆ ಒಂದಲ್ಲಾ ಒಂದು ಶಾಕ್ ನೀಡುತ್ತಿದೆ. ಕಡಿಮೆ ರೀಚಾರ್ಜ್ ಪ್ಲಾನ್, ಡೇಟಾ ಆಫರ್ ಸೇರಿದಂತೆ ಹಲವು ಆಫರ್ ನಡುವೆ ಇದೀಗ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ ಮಾಡಿದೆ.

ಇದರಿಂದ ಪ್ರತಿಸ್ಪರ್ಧಿ ಏರ್​ಟೆಲ್​ ಹಾಗೂ ಜಿಯೋ ಥಂಡಾ ಹೊಡೆದಿವೆ. ಬಿಎಸ್‌ಎನ್‌ಎಲ್ ಇದೀಗ ಡೈರೆಕ್ಟ್ 2 ಡಿವೈಸ್(D2D) ತಂತ್ರಜ್ಞಾನದ ಮೂಲಕ ಯಾವುದೇ ನೆಟ್‌ವರ್ಕ್, ಸಿಮ್ ಇಲ್ಲದೆ ಕರೆ ಮಾಡುವ ಸೌಲಭ್ಯ ನೀಡುತ್ತಿದೆ. ಇದು ಗ್ಲೋಬಲ್ ಸ್ಯಾಟಲೈಟ್ ಕಮ್ಯೂನಿಕೇಶನ್ ವಯಾಸ್ಯಾಟ್ ಜೊತೆಗಿನ ಸಹಭಾಗಿತ್ವದಲ್ಲಿ ಬಿಎಸ್‌ಎನ್‌ಎಲ್ ಹೊಸ ಕ್ರಾಂತಿ ಮಾಡುತ್ತಿದೆ. ಇದರ ಪ್ರಯೋಗ ಯಶಸ್ವಿಯಾಗಿದ್ದು, ಇದು ಎಲ್ಲ ಸ್ಥಳದಲ್ಲೂ ಅತ್ಯುತ್ತಮ ಸಂಪರ್ಕವನ್ನು ಒದಗಿಸಬಲ್ಲದು. ಶೀಘ್ರದಲ್ಲೇ ಈ ಸೇವೆ ಭಾರತೀಯರಿಗೆ ಲಭ್ಯವಾಗಲಿದೆ. ಈ ಮೂಲಕ ಬಿಎಸ್‌ಎನ್‌ಎಲ್ ಸ್ಯಾಟಲೈಟ್ ಸಂವಹನ ಕ್ರಾಂತಿ ಇದೀಗ ಟೆಲಿಕಾಂ ಕ್ಷೇತ್ರದ ಬುಡಮೇಲು ಮಾಡುವಂತಿದೆ.

ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಕರೆ ಮಾಡಲು ಯಾವುದೇ ಸಿಮ್ ಬೇಕಿಲ್ಲ, ಹಳ್ಳಿಯಾಗಲಿ, ಕಾಡಾಗಲಿ, ನೆಟ್‌ವರ್ಕ್ ಇರಬೇಕಿಲ್ಲ. ಎಲ್ಲವೂ ಸ್ಯಾಟಲೈಟ್ ಮೂಲಕವೇ ಸಂವಹನ ನಡೆಯಲಿದೆ. ಆ್ಯಂಡ್ರಾಯ್ಡ್, ಐಒಎಸ್ ಮಾತ್ರವಲ್ಲ, ಸ್ಮಾರ್ಟ್‌ವಾಚ್ ಸೇರಿದಂತೆ ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ಕಾಲ್ ಮಾಡಲು ಸಾಧ್ಯವಿದೆ. ಕಾರು ಬಳಕೆದಾರರು ಕೂಡ ಕಾರಿನಲ್ಲಿರುವ ಸ್ಮಾರ್ಟ್ ಗ್ಯಾಜೆಟ್ ಮೂಲಕ ಸುಲಭವಾಗಿ ಕರೆ ಮಾಡಬಹುದು.

Advertisement

ಪ್ರಮುಖವಾಗಿ ಈ ಸೇವೆ ನೆಟ್‌ವರ್ಕ್ ಇಲ್ಲದ, ರಿಮೂಟ್ ವಲಯಗಳಲ್ಲಿ ಮೊದಲ ಹಂತದಲ್ಲಿ ಬಳಕೆಯಾಗಲಿದೆ. ಕರೆ ಮಾಡಲು ಮೊಬೈಲ್ ಫೋನ್ ಬೇಕೆಂದಿಲ್ಲ. ಸ್ಮಾರ್ಟ್ ಗ್ಯಾಜೆಟ್ ಇದ್ದರೆ ಸಾಕು, ನೇರವಾಗಿ ಸ್ಯಾಟಲೈಟ್ ಮೂಲಕ ಸಂಪರ್ಕ ಸಾಧ್ಯವಿದೆ. ಈ ಮೂಲಕ ಮೂಲೆ ಮೂಲೆಯಲ್ಲರುವ ಮಂದಿಗೆ ಸಂಪರ್ಕ ಸಾಧ್ಯವಾಗಿಸಲು ಬಿಎಸ್‌ಎನ್‌ಎಲ್ ಮಹತ್ತರ ಹೆಜ್ಜೆ ಇಟ್ಟಿದೆ.

Author Image

Advertisement