ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಟೀ ಕುಡಿದ್ರೆ ತಲೆನೋವು ನಿಜವಾಗ್ಲೂ ಕಮ್ಮಿ ಆಗುತ್ತಾ? ಚಹಾ ಪ್ರಿಯರೇ ನೀವು ಓದಲೇಬೇಕಾದ ಸ್ಟೋರಿ!

10:14 AM Oct 06, 2024 IST | BC Suddi
Advertisement
ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಹಲವರಿಗೆ ಟೀ ಬೇಕೆ ಬೇಕು. ಟೀ ಸೇವಿಸಿದ ಮೇಲೆಯೇ ಅವರ ದಿನಚರಿ ಮುಂದುವರೆಯುತ್ತದೆ. ಟೀ ಎಷ್ಟರ ಮಟ್ಟಿಗೆ ಹೆಸರು ಮಾಡಿದೆ ಎಂದರೆ ಪಾಶ್ಷಿಮಾತ್ಯ ದೇಶಗಳಲ್ಲೂ ಇದನ್ನು ತುಂಬಾ ಇಷ್ಟಪಡುವವರಿದ್ದಾರೆ. ಟೀ ಕುಡಿಯದೇ ಇದ್ದರೆ ತುಂಬಾ ತಲೆಕೆಡಿಸಿಕೊಳ್ಳುವ ಜನರೂ ಇದ್ದಾರೆ. ಅದು ಏಕೆ ಗೊತ್ತಾ? ಇದಕ್ಕೆ ಏನಿರಬಹುದು ಕಾರಣ?

ಯಾವಾಗ ಟೀ ಕುಡಿದರೆ ಉತ್ತಮ ಗೊತ್ತಾ? ಮನೆಯಲ್ಲಿ ಟೀ ಕುಡಿಯಲು ಸಾಧ್ಯವಾಗದಿದ್ದರೆ ಕೊನೆಗೆ ರಸ್ತೆ ಅಂಚಿನಲ್ಲಿರುವ ಚಿಕ್ಕ ಗೂಡಂಗಡಿಯಲ್ಲಿ ಟೀ ಕುಡಿದು ಹೋಗುವವರೂ ಇದ್ದಾರೆ. ಒಟ್ಟಿನಲ್ಲಿ ನಮಗೆ ಟೀ ಬೇಕು ಅಷ್ಟೆ. ಹಲವರು ದೈನಂದಿನ ಟೀ ಕಳೆದುಕೊಳ್ಳುವುದರಿಂದ ಮನಸ್ಸಿಗೆ ತುಂಬಾ ತೊಂದರೆಯಾಗುತ್ತೆ. ಮುಖ್ಯವಾದುದನ್ನು ಏನೂ ಬಿಟ್ಟಂತೆ ಅನುಭವವಾಗುತ್ತೆ ಎಂದು ಹೇಳುತ್ತಾರೆ. ಅಷ್ಟರಮಟ್ಟಿಗೆ ಟೀಗೆ ಜನ ಎಡಿಕ್ಟ್ ಆಗಿದ್ದಾರೆ.

Advertisement

ಟೀ ಸೇವನೆಯಿಂದ ನಮ್ಮ ದೇಹಕ್ಕೆ ವಿವಿಧ ಪ್ರಯೋಜನಗಳು ಇದೆ ಹಾಗೆಯೇ ಕೆಲ ಸಮಸ್ಯೆಗಳು ಇದೆ. ಒಂದು ನಿಗದಿತ ಸಮಯದಲ್ಲಿ ಟೀ ಕುಡಿಯುವುದು ಉತ್ತಮ. ಫ್ರೀ ಇದ್ದಾಗಲೆಲ್ಲ ಟೀ ಕುಡಿದರೆ ನಿಮ್ಮ ಆರೋಗ್ಯ ಕೆಡುವುದು ಪಕ್ಕಾ.

ಚಹಾ ಬಗ್ಗೆ ವೈದ್ಯರು ಹೇಳುವುದೇನು? ಇನ್ನು ಕೆಲ ನುರಿತ ವೈದ್ಯರು ಟೀ ಸೇವನೆಯಿಂದ ತಲೆ ನೋವು ಕಡಿಮೆ ಆಗಲ್ಲ ಎಂದು ವರದಿ ಮಾಡಿದ್ದಾರೆ. ಅತೀಯಾದ ಟೀ ಸೇವನೆ ಹಾನಿಕಾರಕ. ಟೀ ಸೇವಿಸುವುದರಿಂದ ತಲೆ ನೋವಿಗೆ ಸಂಬಂಧಿಸಿ ಯಾವ ಪರಿಣಾಮವೂ ಬೀರಲ್ಲ ಎಂದು ವೈದ್ಯರು ಹೇಳುತ್ತಾರೆ. ಟೀನಲ್ಲಿ ಹಲವು ವಿಧವಿದೆ. ಬ್ಲ್ಯಾಕ್ ಮತ್ತು ಗ್ರೀನ್ ಟೀ ಕುಡಿದರೆ ಹಲವು ಪ್ರಯೋಜನಗಳಿವೆ.

ಬ್ಲ್ಯಾಕ್ ಟೀ ಹೆಚ್ಚು ಕೆಫೀನ್ ಅನ್ನು ಹೊಂದಿರುತ್ತದೆ, ಇದು ನಿಮಗೆ ತಲೆನೋವುಗೆ ಸಹಾಯ ಮಾಡುತ್ತದೆ. ಹಾಗೂ ಕೆಫೀನ್ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ, ವಿಶೇಷವಾಗಿ ಕೆಫೀನ್ ಅನ್ನು ತಲೆನೋವು ಅನುಭವಿಸುವವರು ಸ್ವೀಕರಿಸುತ್ತಾರೆ.

ಹಲವರ ಫೇವರೇಟ್ ಈ ಮಸಾಲೆ ಟೀ :

ಸಾಮಾನ್ಯವಾಗಿ ಮಸಾಲಾ ಟೀ ನಲ್ಲಿ ಬಳಸುವ ಶುಂಠಿ, ಏಲಕ್ಕಿ ಮತ್ತು ದಾಲ್ಚಿನ್ನಿಗಳಂತಹ ಮಸಾಲೆಗಳು ಹಲವು ಬಗೆಯ ಉತ್ತಮ ಗುಣಲಕ್ಷಣಗಳನ್ನು ಹೊಂದಿದ್ದು ಇದು ತಲೆ ನೋವು ಮತ್ತು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ಮೈಗ್ರೇನ್ ರೋಗಿಗಳಿಗೆ ಚಿಕಿತ್ಸೆ ನೀಡಲು ಶುಂಠಿ ಪರಿಣಾಮಕಾರಿ ಎಂದು ವೈದ್ಯರು ದೃಢಪಡಿಸಿದ್ದಾರೆ. ಮಸಾಲೆ ಟೀ ತಲೆನೋವನ್ನು ಗುಣಪಡಿಸುತ್ತದೆ ಎಂದು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲದಿದ್ದರೂ ಕೆಲವು ತಜ್ಞರು ಟೀನಲ್ಲಿರುವ ಮಸಾಲೆಗಳು ಹಿತವಾದ ಪರಿಣಾಮವನ್ನು ಬೀರಬಹುದು ಮತ್ತು ಮಾನಸಿಕ ಒತ್ತಡ ಸಂಬಂಧಿತ ತಲೆನೋವುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ.

ಚಹಾವನ್ನು ಸೇವಿಸಲು ಇದು ಸರಿಯಾದ ಸಮಯವಲ್ಲ:

ಊಟಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಮತ್ತು ನಂತರ ಚಹಾ ಸೇವಿಸುವುದನ್ನು ತಡೆಯಲು ಸಂಶೋಧನಾ ಸಂಸ್ಥೆ ಸಲಹೆ ನೀಡಿದೆ. ಏಕೆಂದರೆ ಇದರಲ್ಲಿ ಟ್ಯಾನಿನ್ ಎಂಬ ಅಂಶವು ಕೆಫೀನ್‌ನಂತೆ ಇರುತ್ತದೆ. ಈ ಟ್ಯಾನಿನ್‌ಗಳು ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯ ಮೇಲೆ ಅಡ್ಡಿ ಪರಿಣಾಮಪಡಿಸಬಹುದು. ದೇಹದಲ್ಲಿ ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Advertisement
Next Article