ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಧೋನಿ
11:35 AM Apr 01, 2024 IST | Bcsuddi
Advertisement
ವಿಶಾಖಪಟ್ಟಣ: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ.ಎಸ್. ಧೋನಿ ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ಕ್ಯಾಚ್ ಪಡೆಯುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ 300 ಬ್ಯಾಟರ್ಗಳನ್ನು ಔಟ್ ಮಾಡಿದ ಏಕೈಕ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಈಗಾಗಲೇ ಧೋನಿ ಟಿ20 ಮಾದರಿಯಲ್ಲಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 300 ಬಲಿ ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಅಗ್ರಸ್ಥಾನದಲ್ಲಿದ್ದರೆ, ಇವರ ನಂತರ 2ನೇ ಸ್ಥಾನದಲ್ಲಿರುವ ದಿನೇಶ್ ಕಾರ್ತಿಕ್ 274 ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನದ ಕಮ್ರನ್ ಅಕ್ಮಲ್ ಕೂಡ 274 ಮಂದಿಯನ್ನ ಔಟ್ ಮಾಡಿದ್ದಾರೆ. ನಂತರ ಕ್ವಿಂಟನ್ ಡಿಕಾಕ್, ಜಾಸ್ ಬಟ್ಲರ್ 209 ಬಲಿ ಪಡೆದಿದ್ದಾರೆ.
Advertisement