ಟಿಡಿಆರ್ ಪ್ರಮಾಣ ಪತ್ರಕ್ಕೆ ಲಂಚ ಪ್ರಕರಣ : ಮುಡಾ ಆಯುಕ್ತ ಜೊತೆಗೆ ಬ್ರೋಕರ್ ಅಂದರ್.!
07:27 AM Mar 24, 2024 IST | Bcsuddi
Advertisement
ಮಂಗಳೂರು: ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ಪ್ರಮಾಣಪತ್ರ ನೀಡಲು 25 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತ ಮನ್ಸೂರ್ ಅಲಿ ಮತ್ತು ಬ್ರೋಕರ್ ಮೊಹಮ್ಮದ್ ಸಲೀಂ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಲಿ ಮತ್ತು ಆಯುಕ್ತರ ಪರವಾಗಿ ಲಂಚ ಸ್ವೀಕರಿಸಿದ್ದ ಬ್ರೋಕರ್ ಮೊಹಮ್ಮದ್ ಸಲೀಂ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ ಎಂದು ಲೋಕಾಯುಕ್ತ ಪ್ರಭಾರ ಎಸ್ಪಿ ಚೆಲುವರಾಜು ಬಿ ತಿಳಿಸಿದ್ದಾರೆ.
Advertisement
ಮಂಗಳೂರು ತಾಲೂಕಿನ ಕುಡುಪು ಗ್ರಾಮದ ಸರ್ವೆ ನಂ.57/ಪಿಯಲ್ಲಿ 10.8 ಎಕರೆ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಈ ಲಂಚವನ್ನು ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಮುಡಾ ಆಯುಕ್ತ ಮನ್ಸೂರ್ ಅಲಿ ಮತ್ತು ಬ್ರೋಕರ್ ಮೊಹಮ್ಮದ್ ಸಲೀಂರನ್ನು ಬಂಧಿಸಲಾಗಿದೆ.