ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಟರ್ಕಿಶ್​ ಏರ್​ಲೈನ್ಸ್ ಪೈಲಟ್ ಮಾರ್ಗದ ಮಧ್ಯೆ ಸಾವು- ವಿಮಾನ ತುರ್ತು ಭೂಸ್ಪರ್ಶ

12:43 PM Oct 10, 2024 IST | BC Suddi
Advertisement

ಇಸ್ತಾನ್‌ಬುಲ್‌ : ಟರ್ಕಿ ರಾಷ್ಟ್ರೀ ಯ ವಿಮಾನಯಾನ ಸಂಸ್ಥೆಯಾದ ಟರ್ಕಶ್‌ ಏರ್‌ಲೈಸ್‌ ಪೈ ಲಟ್ ವಿಮಾನ ಹಾರಾಟ ಸಂದರ್ಭ ದಲ್ಲೇ ಮೃತಪಟ್ಟಿದ್ದಾರೆ. ಇದರಿಂದಾಗಿ ವಿಮಾನವು ನ್ಯೂಯಾರ್ಕ್‌ ನಲ್ಲಿ ಬುಧವಾರ ತುರ್ತು ಭೂಸ್ಪರ್ಶ ಮಾಡಿದೆ.

Advertisement

ಈ ಕುರಿತಂತೆ ವಿಮಾನಯಾನ ಸಂಸ್ಥೆಯ ವಕ್ತಾರ ಯಾಹ್ಯಾ ಉಸ್ತುನ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಏರ್ಬಸ್ 350 (TK204) ವಿಮಾನವು ಅಮೆರಿಕದ ಪಶ್ಚಿಮ ಕರಾವಳಿ ಪ್ರದೇಶವಾದ ಸೀಟಲ್ನಿಂ ದ ಇಸ್ತಾನ್ಬುಲ್ ಕಡೆಗೆ ಮಂಗಳವಾರ ಸಂಜೆ ಪ್ರಯಾಣ ಆರಂಭಿಸಿತು. ಕ್ಯಾಪ್ಟನ್ ಇಲ್ಸೆನ್ ಪೆಲಿವೆನ್ (59)ಮಾರ್ಗ ದ ನಡುವೆಯೇ ಅಸ್ವಸ್ಥಗೊಂಡರು. ಅವರಿಗೆ ಪ್ರಥಮ ಚಿಕಿತ್ಸೆ ಚಿಕಿತ್ಸೆಗೂ ಸ್ಪಂದಿಸಿಲ್ಲ. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲು ಸಹ ಪೈ ಲಟ್ ನಿರ್ಧರಿಸಿದರು. ವಿಮಾನ ಕೆಳಕ್ಕಿಳಿಯುವ ಹೊತ್ತಿಗಾಗಲೇ ಮುಖ್ಯ ಪೈಲಟ್ ಮೃತಪಟ್ಟಿದ್ದರು ಎಂದು ತಿಳಿಸಿದೆ.

ಮೃತ ಪೈಲಟ್ ಅವರು 2007ರಿಂದ ಟರ್ಕಿ ಷ್ ಏರ್‌ಲೈನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್‌ ನಲ್ಲಿ ಅವರು ವೈದ್ಯಕೀ ಯ ಪರೀಕ್ಷೆ ತಪಾಸಣೆಗೆ ಒಳಪಟ್ಟು, ಸದೃಢ ಪ್ರಮಾಣಪತ್ರ ಸಲ್ಲಿಸಿದ್ದರು. ಅದರಲ್ಲಿ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಕುರಿತು ಮಾಹಿತಿ ಇರಲಿಲ್ಲ ಎಂದು ವಕ್ತಾರರು ಹೇಳಿದ್ದಾರೆ.

 

Advertisement
Next Article