For the best experience, open
https://m.bcsuddi.com
on your mobile browser.
Advertisement

ಜ.28 ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಪರೀಕ್ಷೆ

10:01 AM Jan 24, 2024 IST | Bcsuddi
ಜ 28 ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಪರೀಕ್ಷೆ
Advertisement

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 3064 ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಹುದ್ದೆಗಳಿಗೆ (ಪುರುಷ, ತೃತೀಯ ಲಿಂಗಿಗಳು) ಲಿಖಿತ ಪರೀಕ್ಷೆ ಇದೇ ತಿಂಗಳು 28ರಂದು ನಡೆಯಲಿದ್ದು, ಈ ಸಂಬಂಧ ಅಭ್ಯರ್ಥಿಗಳು ಪಾಲಿಸಬೇಕಾದ ವಸ್ತ್ರಸಂಹಿತೆ ಮಾರ್ಗಸೂಚಿ ಹೊರಡಿಸಲಾಗಿದೆ.

ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಹಿಂದೆ ನಡೆದಿದ್ದ ಪಿಎಸ್ಸೈ ಹಗರಣವನ್ನು ಸಶಸ್ತ್ರ ಪೊಲೀಸ್ ಕಾನ್‌ ಸ್ಟೇಬಲ್ ಪರೀಕ್ಷೆಯಲ್ಲಿ ಮರುಕಳಿಸದಂತೆ ಎಚ್ಚರ ವಹಿಸುವುದು ಪೊಲೀಸ್ ನೇಮಕಾತಿ ವಿಭಾಗದ ಜವಾಬ್ದಾರಿಯಾಗಿದೆ.

ಹೀಗಾಗಿ ಪರೀಕ್ಷೆ ಬರೆಯುವವರ ಹೀಗಾಗಿ ಪರೀಕ್ಷೆ ಬರೆಯುವವರು ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಆದೇಶ ಹೊರಡಿಸಲಾಗಿದೆ.
ಜನವರಿ 28ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರ ವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ನಿಗದಿತ ಸಮಯಕ್ಕೂ ಮುಂಚಿತವಾಗಿ ಹಾಜರಿರಬೇಕು ಎಮದು ಸೂಚಿಸಲಾಗಿದೆ.

Advertisement

Author Image

Advertisement