ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜ.10ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ: ಡಾ. ಡಿ.ವಿ ಪರಮಶಿವಮೂರ್ತಿ

07:40 AM Jan 06, 2024 IST | Bcsuddi
Advertisement

 

Advertisement

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ, ಘಟಿಕೋತ್ಸವವನ್ನು ಜ.10ರಂದು ಸಂಜೆ 5.30ಕ್ಕೆ ಹಂಪಿ ವಿದ್ಯಾರಣ್ಯದ `ನವರಂಗ’ ಬಯಲು ರಂಗಮAದಿರದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿಯವರಾದ ಡಾ. ಡಿ.ವಿ ಪರಮಶಿವಮೂರ್ತಿ ಅವರು ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವ ಕುರಿತಂತೆ ಶುಕ್ರವಾರ ವಿವಿಯ ಮಂಟಪ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು 32ನೇ ನುಡಿಹಬ್ಬ, ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು.

ಎಲ್ಲಾ ವಿಶ್ವವಿದ್ಯಾಲಯಗಳು ಘಟಿಕೋತ್ಸವವನ್ನು ಆಚರಿಸುತ್ತವೆ. 33 ವರ್ಷಗಳನ್ನು ಪೂರೈಸಿರುವ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದಲೂ ಘಟಿಕೋತ್ಸವವನ್ನು `ನುಡಿಹಬ್ಬ’ ಎಂದು ಆಚರಿಸುತ್ತಾ ಬಂದಿದೆ. ಈ ಬಾರಿಯ 32ನೇ ನುಡಿಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಭಾಷಾ ನಿಕಾಯ, ಸಮಾಜವಿಜ್ಞಾನಗಳ ನಿಕಾಯ ಹಾಗೂ ಲಲಿತಕಲೆಗಳ ನಿಕಾಯ ವಿಭಾಗಗಳಲ್ಲಿ ಒಟ್ಟು 264 ವಿದ್ಯಾರ್ಥಿಗಳು ಪಿಎಚ್.ಡಿ. ಪದವಿಯನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಒಬ್ಬರಿಗೆ ಡಿ.ಲಿಟ್ ಪದವಿಯನ್ನು ಸಹ ನೀಡಲಾಗುತ್ತಿದೆ. ಪಿಎಚ್.ಡಿ. ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಒಬ್ಬ ಹೆಣ್ಣು ಮಗಳು ಕೇರಳ ಮತ್ತು ತೆಮ್ಮಿಳುನಾಡಿನ ಗಡಿಭಾಗದದಲ್ಲಿನ ಪಣಿಯನ್ ಬುಡಕಟ್ಟು ಸಮುದಾಯಕ್ಕೆ ಸೇರಿದ್ದು, ನಮ್ಮ ವಿವಿಯಲ್ಲಿ ಸಮಾಜಶಾಸ್ತç ವಿಭಾಗದಿಂದ ಈ ಬಾರಿ ಪಿಎಚ್.ಡಿ. ಪಡಿದಿರುವುದು, ಆ ಸಮುದಾಯಕ್ಕೆ ಮತ್ತು ನಮ್ಮ ವಿವಿಗೆ ಹೆಮ್ಮಯ ವಿಷಯವಾಗಿದೆ ಎಂದರು.

ಗೌರವ ಡಾಕ್ಟರೇಟ್‌ಗೆ ಸಮಾನವಾದ `ನಾಡೋಜ’ ಗೌರವ ಪದವಿಯನ್ನು ಬೀದರ್ ಜಿಲ್ಲೆಯ ಕನ್ನಡ ಸ್ವಾಮೀಜಿ ಎಂದು ಹೆಸರು ಪಡೆದಿರುವ ಬಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಮೂಲತಃ ಧಾರವಾಡದ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಆಂದ್ರಪ್ರದೇಶದ ಸರ್ಕಾರಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ತೇಜಸ್ವಿ ವಿ. ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಬೆಂಗಳೂರಿನ ಡಾ. ಎಸ್.ಸಿ. ಶರ್ಮಾ, ಈ ಮೂರು ಗಣ್ಯರಿಗೆ ಪ್ರದಾನ ಮಾಡಲಾಗುತ್ತಿದೆ ಎಂದು ಹೇಳಿದರು.

ನುಡಿಹಬ್ಬದ ಪ್ರಯುಕ್ತ ಜ.9ಕ್ಕೆ ಪುಸ್ತಕ ಬಿಡುಗಡೆ ಸಮಾರಂಭವು ಸಹ ನಡೆಯಲಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ, 32ನೇ ನುಡಿಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಕುಲಸಚಿವರಾದ ಡಾ. ವಿಜಯ್ ಪೂಣಚ್ಚ ತಂಬAಡ, ಪ್ರಾಧ್ಯಾಪಕರಾದ ಡಾ. ಎಫ್.ಟಿ.ಹಳ್ಳಿಕೇರಿ, ಡಾ. ಚಲುವರಾಜು, ಡಾ. ಶಿವಾನಂದ ಎಸ್. ವಿರಕ್ತಮಠ, ಸೇರಿದಂತೆ ವಿದ್ಯಾಲಯದ ಪ್ರಾಧ್ಯಾಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement
Next Article