ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜೈಲಲ್ಲಿ ಕ್ರಿಮಿನಲ್ಸ್ ಅಲ್ಲದೆ ಮತ್ತ್ಯಾರು ಸಿಗ್ತಾರೆ..? ಮಾಧ್ಯಮದವರನ್ನೇ ಪ್ರಶ್ನಿಸಿದ ಸುಮಲತಾ ಅಂಬರೀಷ್

04:09 PM Aug 27, 2024 IST | BC Suddi
Advertisement

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದಾರೆ ಎನ್ನುವ ವಿಚಾರ ಸದ್ಯ ಚರ್ಚೆಯಲ್ಲಿದೆ. ಈ ಬಗ್ಗೆ ಮಾತನಾಡಿದ ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಜೈಲಿನಲ್ಲಿ ವಿಐಪಿ ಆರೋಪಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೇ ಈ ಬಗ್ಗೆ ಆರೋಪಗಳು ಸಾಕಷ್ಟು ಬಂದಿದ್ದವು. ಈಗ ದರ್ಶನ್ ವಿಚಾರದಲ್ಲಿ ಮಾತ್ರ ಏಕೆ ಸುದ್ದಿಯಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಜೈಲಲ್ಲಿ ಸ್ವಲ್ಪ ಹಣ ಖರ್ಚು ಮಾಡಿದರೆ ಅವರಿಗೆ ಎಲ್ಲ ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಫೋನ್, ಸಿಗರೇಟ್, ಡ್ರಗ್ಸ್, ಡ್ರಿಂಕ್ಸ್ ವ್ಯವಸ್ಥಿತವಾಗಿ ಸಿಗುವ ವ್ಯವಸ್ಥೆ ಕೇವಲ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಾತ್ರವಲ್ಲ ಕರ್ನಾಟಕ, ಇಡೀ ಇಂಡಿಯಾದಲ್ಲಿ ಮತ್ತು ಅಮೆರಿಕದಂತಹ ದೇಶಗಳಲ್ಲಿ ಕೂಡ ನಡೆಯುತ್ತದೆ. ಇದು ವ್ಯವಸ್ಥೆಯಲ್ಲಿ ಭ್ರಷ್ಠಾಚಾರ, ಕಾನೂನಿಗೆ ವಿರುದ್ಧವಾಗಿದೆ. ಆದರೆ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ಹೀಗಿರುವಾಗ ನೀವು ದರ್ಶನ್ ಒಬ್ಬ ವ್ಯಕ್ತಿಯನ್ನೇ ಗುರಿಯಾಗಿಟ್ಟುಕೊಂಡು ಏಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು. ಜೈಲಲ್ಲಿ ಈ ರೀತಿ ನಡೆಯುತ್ತಿರುವುದು ಇದೇ ಮೊದಲಾ ಎಂದು ನೀವೇ ಎದೆ ಮುಟ್ಟಿಕೊಂಡು ಒಂದು ಸಾರಿ ಹೇಳಿ, ದರ್ಶನ್ ಇರೋದರಿಂದ ಅವರದ್ದು ತಪ್ಪು ಎಂದು ಫೋಕಸ್ ಆಗುತ್ತಿದೆ. ಈ ಹಿಂದೆ ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಈ ಬಗ್ಗೆ ಆಕ್ಷೇಪ ಎತ್ತಿ ಇಂತಹ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದರು. ಆ ಸಮಯದಲ್ಲಿ ಮಾಧ್ಯಮಗಳು ಸರ್ಕಾರವನ್ನು ಏಕೆ ಪ್ರಶ್ನೆ ಮಾಡಲಿಲ್ಲ, ಆ ಸಮಯದಲ್ಲಿ ಇದನ್ನು ಸುದ್ದಿ ಮಾಡದೆ ಅವರನ್ನೇ ವರ್ಗ ಮಾಡಲಾಗಿತ್ತು ಎಂದು ಹೇಳಿದರು. ಇನ್ನು ಜೈಲಿನಲ್ಲಿರುವವವರು ಕ್ರಿಮಿನಲ್ ಹಿನ್ನೆಲೆಯಿಂದ ಬಂದಿರುವವರೇ ಆಗಿರುತ್ತಾರೆ. ದರ್ಶನ್ ಅವರ ಜೊತೆ ಓಡಾಡದೆ ಮತ್ತಿನ್ಯಾರ ಜೊತೆ ಓಡಾಡಬೇಕು, ಈ ಬಗ್ಗೆ ಜೈಲಿನ ಅಧಿಕಾರಿಗಳು ಗಮನ ಹರಿಸಬೇಕು. ಜೈಲಲ್ಲಿ ಜೊತೆಯಲ್ಲಿ ಕೂರಲು, ಮಾತನಾಡಲು ಮತ್ತಿನ್ಯಾರು ಸಿಗ್ತಾರೆ, ಜೈಲಲ್ಲಿ ಮತ್ತಿನ್ಯಾರನ್ನೂ ಮಾತನಾಡಿಸಬಾರದು ಎಂಬ ರೀತಿಯಲ್ಲಿ ನೀವು ಹೇಳುತ್ತಿದ್ದೀರಿ ಎಂದು ಮಾಧ್ಯಮ ಪ್ರತಿನಿಧಿಗಳನ್ನೇ ಪ್ರಶ್ನಿಸಿದರು.

Advertisement

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Advertisement
Next Article