For the best experience, open
https://m.bcsuddi.com
on your mobile browser.
Advertisement

ಜೂ.14 ರಿಂದ SSLC ಪರೀಕ್ಷೆ-2 ಪ್ರಾರಂಭ

12:19 PM May 18, 2024 IST | Bcsuddi
ಜೂ 14 ರಿಂದ sslc ಪರೀಕ್ಷೆ 2 ಪ್ರಾರಂಭ
Advertisement

ಮೇ.15 ರಿಂದ ಆರಂಭವಾಗಿದ್ದ 5610 ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

SSLC ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ  ವಿದ್ಯಾರ್ಥಿಗಳಿಗೆ ಜೂನ್‌ 7 ರಿಂದ ನಡೆಯಬೇಕಿದ್ದ SSLC ಪರೀಕ್ಷೆ-2 ನ್ನು ಕೂಡ ಮುಂದೂಡಲಾಗಿದೆ. ಈ ಹಿಂದೆ ಮೇ 15ರಿಂದ ಜೂನ್‌ 5ರವರೆಗೆ ನಡೆಸಲು ಸರ್ಕಾರ ಸುತ್ತೋಲೆ ಹೊರಡಿಸಿತ್ತು.

ಈಗ ಸರ್ಕಾರದ ಸೂಚನೆ ಮೇರೆಗೆ ದಿನಾಂಕವನ್ನು ಮುಂದೂಡಿರುವ ಪ್ರೌಢ ಶಿಕ್ಷಣ ಇಲಾಖೆ, ವಿಶೇಷ ತರಗತಿಗಳನ್ನು ಮೇ 29 ರಿಂದ ಜೂನ್‌ 13ರವರೆಗೆ ನಡೆಸಲು ಆದೇಶ ನೀಡಲಾಗಿದೆ.

Advertisement

Author Image

Advertisement