ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜುಲೈ 4ರಂದು ಬ್ರಿಟನ್‌ ಸಾರ್ವತ್ರಿಕ ಚುನಾವಣೆ- ಪ್ರಧಾನಿ ರಿಷಿ ಸುನಕ್

01:48 PM May 24, 2024 IST | Bcsuddi
Advertisement

ಲಂಡನ್: ಜುಲೈ 4ರಂದು ದೇಶದ ಸಾರ್ವತ್ರಿಕ ಚುನಾವಣೆಯು ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಣೆ ಮಾಡಿದ್ದಾರೆ.

Advertisement

ಭಾರತ ಮೂಲದ ಮೊದಲ ಪ್ರಧಾನಿಯಾಗಿರುವ ರಿಷಿ, ಚುನಾವಣೆ ಕುರಿತು ರಾಜಕುಮಾರ 3ನೇ ಚಾರ್ಲ್ಸ್‌ ಅವರಿಗೆ ಔಪಚಾರಿಕವಾಗಿ ಮಾಹಿತಿ ನೀಡಲಾಗಿದೆ. ಸಂಸತ್‌ನ್ನು ಶೀಘ್ರವೇ ವಿಸರ್ಜಿಸಲಾಗುವುದು ಎಂದು ತಿಳಿಸಿದ್ದಾರೆ.

ಲಂಡನ್ನ 'ಡೌನಿಂಗ್ ಸ್ಟ್ರೀಟ್'ನಲ್ಲಿ ಬುಧವಾರ ನಡೆದ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ರಿಷಿ, ತಮ್ಮ ಆಡಳಿತದ ಸಾಧನೆಗಳನ್ನು ಜನರೆದುರು ತೆರೆದಿಟ್ಟಿದ್ದಾರೆ. ಅದೇ ವೇಳೆ ಅವರು, ನನ್ನ ಅಧಿಕಾರಾವಧಿಯಲ್ಲಿಜನರಿಗೆ ಸೂಕ್ತ ರಕ್ಷಣೆ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇನೆ. ಇದೇ ನನ್ನ ವಾಗ್ದಾನ. ಬ್ರಿಟನ್ ಜನರು ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳುವ ಸಮಯ ಇದಾಗಿದೆ ಎಂದು ಹೇಳಿದ್ದಾರೆ.

ಇತ್ತೀ ಚೆಗೆ ನಡೆದ ಉಪ ಚುನಾವಣೆಗಳು ಹಾಗೂ ಸ್ಥಳೀ ಯ ಚುನಾವಣೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿರುವ ವಿರೋ ಧ ಪಕ್ಷ ಲೇಬರ್ ಪಾರ್ಟಿ , ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀ ಕ್ಷೆಗಳು ಹೇಳಿವೆ. ಇದರ ಬೆನ್ನಲ್ಲೇ ಚುನಾವಣೆ ಘೋಷಣೆಯಾಗಿದೆ.

Advertisement
Next Article