For the best experience, open
https://m.bcsuddi.com
on your mobile browser.
Advertisement

ಜುಲೈನಲ್ಲಿ ಪೂರ್ಣ ಬಜೆಟ್‌ ಮಂಡನೆ : ಮಾತಲ್ಲೇ ಮತ್ತೊಮ್ಮೆ ಬಿಜೆಪಿ ಸುಳಿವು ಕೊಟ್ಟ ನಿರ್ಮಲಾ

02:55 PM Feb 01, 2024 IST | Bcsuddi
ಜುಲೈನಲ್ಲಿ ಪೂರ್ಣ ಬಜೆಟ್‌ ಮಂಡನೆ   ಮಾತಲ್ಲೇ ಮತ್ತೊಮ್ಮೆ ಬಿಜೆಪಿ ಸುಳಿವು ಕೊಟ್ಟ ನಿರ್ಮಲಾ
Advertisement

ದೆಹಲಿ : ಸಂಸತ್ತಿನಲ್ಲಿ ಮಂಧ್ಯಂತರ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕುತೂಹಲಕಾರಿ ಕಾಮೆಂಟ್‌ ಮಾಡಿದ್ದಾರೆ. ಇದು ಮಧ್ಯಂತರ ಬಜೆಟ್‌ ಮಾತ್ರ. 'ವಿಕಸಿತ ಭಾರತವನ್ನು ಸಾಧಿಸಲು ನಮ್ಮ ಸರ್ಕಾರದ ವಿವರವಾದ ಮಾರ್ಗಸೂಚಿಯನ್ನು ಜುಲೈನಲ್ಲಿ ಪೂರ್ಣ ಬಜೆಟ್‌ನೊಂದಿಗೆ ಮಂಡಿಸುತ್ತೇವೆ' ಎಂದಿದ್ದಾರೆ. ಈ ಮೂಲಕ 2024 ರಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲಿದೆ ಎಂದು ಅವರು ಪರೋಕ್ಷವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಆತ್ಮವಿಶ್ವಾಸದಿಂದ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.

Author Image

Advertisement