For the best experience, open
https://m.bcsuddi.com
on your mobile browser.
Advertisement

ಜಾಬ್ ಸೆ.11 ರಂದು ನೇರ ನೇಮಕಾತಿ ಸಂದರ್ಶನ

08:10 AM Sep 07, 2024 IST | BC Suddi
ಜಾಬ್ ಸೆ 11 ರಂದು ನೇರ ನೇಮಕಾತಿ ಸಂದರ್ಶನ
Advertisement

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವತಿಯಿಂದ ಇದೇ ಸೆ.11ರಂದು ಬೆಳಿಗ್ಗೆ 10.30 ರಿಂದ 3 ರವರೆಗೆ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ನಡೆಯಲಿದೆ.

ಸಂದರ್ಶನದಲ್ಲಿ 3ಕ್ಕೂ ಹೆಚ್ಚು ಖಾಸಗಿ ಕಂಪನಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹೊಂದಿರುವ 18 ರಿಂದ 30 ವರ್ಷದೊಳಗಿನ ಪುರುಷ ಅಥವಾ ಮಹಿಳೆ ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿಕೊಳ್ಳಲಿದ್ದು, ಅಭ್ಯರ್ಥಿಗಳು 3 ಬಯೋಡಾಟಾ ಪ್ರತಿಗಳು, ವಿದ್ಯಾರ್ಹತೆಯ ಪ್ರಮಾಣ ಪತ್ರಗಳು, ಅಗತ್ಯ ದಾಖಲೆಗಳು ಹಾಗೂ ಫೋಟೊಗಳೊಂದಿಗೆ ಭಾಗವಹಿಸಬಹುದು.

Advertisement

ಹೆಚ್ಚಿನ ಮಾಹಿತಿಗಾಗಿ ನಗರದ ಹಳೇ ಸ್ಟೇಡಿಯಂ ರಸ್ತೆಯಲ್ಲಿನ ಉದ್ಯೋಗ ವಿನಿಮಯ ಕೇಂದ್ರ ಕಚೇರಿ ದೂರವಾಣಿ ಸಂಖ್ಯೆ 7022459064, 8105619020, 9945587060, 7019759147 ಗೆ ಸಂಪರ್ಕಿಸಬಹುದು ಎಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

Tags :
Author Image

Advertisement