ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜಾಂಬೂ ಹಣ್ಣಿನಲ್ಲಿರುವ ಔಷಧೀಯ ಗುಣಗಳು

09:00 AM Jul 30, 2024 IST | BC Suddi
Advertisement

ಜಾಂಬೂ, ವಾಟರ್‌ ಆ್ಯಪಲ್‌, ರೋಸ್‌ ಆ್ಯಪಲ್ ಹೀಗೆ ನಾನಾ ಹೆಸರಿನಿಂದ ಕರೆಯಲ್ಪಡುವ ಈ ಹಣ್ಣು ಕೊಡಗು, ದಕ್ಷಿಣ ಕನ್ನಡ, ಮಲ್ನಾಡು, ಚಿಕ್ಕ ಮಗಳೂರು ಹೀಗೆ ಕರ್ನಾಟಕದ ಬಹುತೇಕ ಸ್ಥಳಗಳಲ್ಲಿ ಕಾಣಸಿಗುವುದು.

Advertisement

ಇದು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕಂಡು ಬಂದರೆ ಕೆಲವೊಂದು ಮರಗಳಲ್ಲಿ ಮಳೆಗಾಲದಲ್ಲಿ, ಚಳಿಗಾಲದಲ್ಲೂ ಕಂಡು ಬರುವುದು. ಆದ್ದರಿಂದ ಇದನ್ನು ಇದೇ ಕಾಲದಲ್ಲಿ ಬೆಳೆಯುತ್ತದೆ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ, ಬಹುತೇಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಈ ಹಣ್ಣಿನಲ್ಲಿದೆ ದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತೆ, ವಿಟಮಿನ್‌ ಎ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು, ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೂ ತುಂಬಾನೇ ಒಳ್ಳೆಯದು.ಇದು ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.

ಇದರಲ್ಲಿರುವ ವಿಟಮಿನ್ ಸಿ ಆ್ಯಂಟಿಆಕ್ಸಿಡೆಂಟ್‌ ಆಗಿ ವರ್ತಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಇದರಲ್ಲಿರುವ ಸೋಡಿಯಂ ಹಾಗೂ ಕೊಲೆಸ್ಟ್ರಾಲ್‌ ಅಂಶ ಇಲ್ಲದೇ ಇರುವುದರಿಂದ ಸ್ಟ್ರೋಕ್ ಅಪಾಯ ತಗ್ಗಿಸುತ್ತೆ. ಉರಿಯೂತ ಕಡಿಮೆ ಮಾಡುವುದು, ಹೃದಯದ ಆರೋಗ್ಯ ವೃದ್ಧಿಸುವುದು. ಅಲ್ಲದೆ ಇದು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು. ಈ ಹಣ್ಣಿನಲ್ಲಿ ಸಾಕಷ್ಟು ನೀರಿನಂಶ ಹಾಗೂ ಪೊಟಾಷ್ಯಿಯಂ ಇದೆ. ಇದರಿಂದ ಸ್ನಾಯುಗಳ ಸೆಳೆತ ಕಡಿಮೆಯಾಗುವುದು. ದೇಹದಲ್ಲಿ ನೀರಿನಂಶ, ಪೊಟಾಷ್ಯಿಯಂ, ಸೋಡಿಯಂ ಕಡಿಮೆಯಾದರೆ ಸ್ನಾಯು ಸೆಳೆತ ಉಂಟಾಗುವುದು.

ಮಧುಮೇಹಿಗಳಿಗೆ, ಗರ್ಭಿಣಿಯರಿಗೆ ಈ ಹಣ್ಣು ತುಂಬಾ ಒಳ್ಳೆಯದು. ಇದರಲ್ಲಿರುವ ಸೋಡಿಯಂ ಹಾಗೂ ಕೊಲೆಸ್ಟ್ರಾಲ್‌ ಅಂಶ ಇಲ್ಲದೇ ಇರುವುದರಿಂದ ಸ್ಟ್ರೋಕ್ ಅಪಾಯ ತಗ್ಗಿಸುತ್ತೆ. ಉರಿಯೂತ ಕಡಿಮೆ ಮಾಡುವುದು, ಹೃದಯದ ಆರೋಗ್ಯ ವೃದ್ಧಿಸುವುದು. ಅಲ್ಲದೆ ಇದು ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವುದು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು.

Advertisement
Next Article