ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಚೆನ್ನೈ -ಬೆಂಗಳೂರು ಗ್ರೀನ್‌ ಫೀಲ್ಡ್‌ ಎಕ್ಸ್‌ಪ್ರೆಸ್‌ ವೇ ಕಾಮಗಾರಿ ಡಿಸೆಂಬರ್‌ ವೇಳೆ ಪೂರ್ಣ- ನಿತಿನ್‌ ಗಡ್ಕರಿ

05:51 PM Feb 08, 2024 IST | Bcsuddi
Advertisement

ನವದೆಹಲಿ:ಚೆನ್ನೈ -ಬೆಂಗಳೂರು ಗ್ರೀನ್‌ ಪೀಲ್ಡ್‌ ಎಕ್ಸ್ಪ್ರೆಸ್ ವೇ ಪ್ರಸಕ್ತ ಸಾಲಿನಲ್ಲೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದ್ದಾರೆ.

Advertisement

ಲೋಕಸಭೆಯಲ್ಲಿ ಈ ಕುರಿತು ಮಾಹಿತಿ ಅವರು, ಆಯಾ ಸರ್ಕಾರಗಳು ನಿರ್ಮಾಣ ಸಾಮಾಗ್ರಿಗಳನ್ನು ಲಭ್ಯವಾಗುವಂತೆ ಮಾಡಲು ಭಾರತೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೆರವಾಗುವಂತೆ ಈ ವೇಳೆ ಅವರು ಆಗ್ರಹಿಸಿದರು.

ಡಿಸೆಂಬರ್‌ಗೂ ಮೊದಲು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಪಯತ್ನಿಸುತ್ತಿದ್ದೇವೆ ಎಂದು ನಾನು ಈ ಸದನಕ್ಕೆ ಭರವಸೆ ನೀಡುತ್ತೇನೆ. ಈ ರಸ್ತೆ ನಿರ್ಮಾಣ ಮೂಲಕ ಚೆನ್ನೈ - ಬೆಂಗಳೂರು ನಡುವಣ ಅಂತರವನ್ನು ಕೇವಲ ಎರಡು ಗಂಟೆಗಳಲ್ಲಿ ಕ್ರಮಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹೆದ್ದಾರಿ ನಿರ್ಮಾಣದಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ .ಕೆ. ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

Advertisement
Next Article