ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಚೆನ್ನೈ ಏರ್ ಶೋನಲ್ಲಿ ದುರಂತ – ಬಿಸಿಲಿನ ಝಳಕ್ಕೆ ಐವರು ಸಾವು, 2೦೦ಕ್ಕೂ ಹೆಚ್ಚು ಮಂದಿ ಅಸ್ವಸ್ಥ

02:12 PM Oct 07, 2024 IST | BC Suddi
Advertisement

ಚೆನ್ನೈ : ಭಾರತೀಯ ವಾಯುಪಡೆಯ 92 ವರ್ಷಗಳನ್ನು ಪೂರ್ಣಗೊಳಿಸಿದ ಸಂಭ್ರಮಾಚರಣೆ ಹಿನ್ನೆಲೆ ಚೆನ್ನೈನ ಮರೀನಾ ಬೀಚ್‌ನಲ್ಲಿ ಏರ್ ಶೋ ನಡೆಸಿದೆ. ಈ ವೇಳೆ  ಬಿಸಿಲಿನ ಝಳಕ್ಕೆ 5 ಮಂದಿ ಸಾವಾಗಿದ್ದು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ.

Advertisement

ವಾಯುಪಡೆ ಸಂಸ್ಥಾಪನಾ ದಿನ ನಿಮಿತ್ತ ದಕ್ಷಿಣ ಭಾರತದಲ್ಲಿ ನಡೆದ ಮೊದಲ ಏರ್ ಶೋ ಇದಾಗಿತ್ತು.ಕಾರ್ಯಕ್ರಮದಲ್ಲಿ ಸುಮಾರು 72 ವಿಮಾನಗಳು ವಿವಿಧ ಸಾಹಸಗಳನ್ನು ಪ್ರದರ್ಶಿಸಿದ್ದವು. 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆಗೆ ಆಗಮಿಸಿದ್ದರು.

ಏರ್ ಶೋ ವೀಕ್ಷಿಸಿ ವಾಪಾಸ್ ತೆರಳುವಾಗ ಬಿಸಿಲಿನ ತಾಪಕ್ಕೆ ಜನರ ನಡುವೆ ನೂಕು ನುಗ್ಗಲು ಸಂಭವಿಸಿದೆ. ಈ ವೇಳೆ ಉಸಿರಾಡಲಾಗದೇ 230ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. 100 ಕ್ಕೂ ಹೆಚ್ಚು ಜನರಿಗೆ ಉಸಿರಾಟದ ಸಮಸ್ಯೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ವಾಹನ ಸಂದಣಿ ಹಾಗೂ ಜನಸಂದಣಿ ಏರ್ಪಟ್ಟಿತ್ತು. ಅಸ್ವಸ್ಥರಾದವರನ್ನ ಆಂಬ್ಯಲೆನ್ಸ್ಗೆ ಸಾಗಿಸಿವುದಕ್ಕೆ ಪರದಾಡಬೇಕಾಯಿತು.

ಮೃತರನ್ನು ಜಾನ್ (60), ತಿರುವೊಟ್ಟಿಯೂರು ಮೂಲದ ಕಾರ್ತಿಕೇಯನ್, ದಿನೇಶ್ ಕುಮಾರ್ (37), ಪೆರುಂಗಲತ್ತೂರಿನ ಶ್ರೀನಿವಾಸನ್, ಎಂದು ಗುರುತಿಸಲಾಗಿದೆ.

 

 

Advertisement
Next Article