ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಚುನಾವಣೆ ಸಮಯದಲ್ಲಿ ಗನ್ ಜಮೆಗೆ ಹಲವರಿಗೆ ರಿಯಾಯತಿ ನೀಡಿದ ಇಲಾಖೆ

12:50 PM Mar 17, 2024 IST | Bcsuddi
Advertisement

ಬೆಂಗಳೂರು: ಯಾವುದೇ ಚುನಾವಣಾ ಸಂದರ್ಭದಲ್ಲಿ ನಾಗರೀಕರು, ರಾಜಕಾರಣಿಗಳು, ಪ್ರಭಾವಿಗಳು ಹಾಗೂ ರೌಡಿ ಶೀಟರ್‌ಗಳು ತಮ್ಮ ಬಳಿ ಇರುವ ಗನ್, ರೈಫಲ್ ಮತ್ತು ಪಿಸ್ತೂಲ್ ಮಾದರಿಯ ಶಸ್ತ್ರಾಸ್ತ್ರಗಳನ್ನು ತಮ್ಮ ಮನೆ ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೋ ಆ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಬೇಕಿತ್ತು. ಗನ್ ಜಮೆ ಮಾಡಿ ಚುನಾವಣಾ ಚಟುವಟಿಕೆ ಮುಗಿದ‌ ನಂತರ ಈ ಗನ್‌ಗಳನ್ನು ಬಿಡಿಸಿಕೊಳ್ಳುವುದು ನಿಯಮ.

Advertisement

ಆದರೆ ನಗರ ಪೊಲೀಸ್ ಇಲಾಖೆ ಈ ನಿಯಮದಲ್ಲಿ ಕೆಲ ಬದಲಾವಣೆ ತಂದಿದೆ. ನಾಲ್ಕು ವರ್ಗಗಳನ್ನು ಮಾಡಿರುವ ಇಲಾಖೆ ಈ ನಾಲ್ಕು ವರ್ಗಗಳಿಗೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗತ್ಯವಿಲ್ಲ ಎಂದು ಸೂಚನೆ ಹೊರಡಿಸಿದೆ. ನಾಲ್ಕು ವರ್ಗಗಳು ಯಾವುವು ಎಂದು ನೋಡೋದಾದ್ರೆ

1. ಜಾಮೀನಿನ ಮೇಲೆ‌ಹೊರಗಿರುವ ವ್ಯಕ್ತಿಗಳು

2. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು (ರೌಡಿ ಶೀಟರ್ಸ್)

3. ಈ ಹಿಂದೆ ಯಾವೂದೇ ಸಂದರ್ಭದಲ್ಲಿ ಗಲಭೆಯಲ್ಲಿ ಭಾಗಿಯಾಗಿರೋರು ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ

4. ಯಾವೂದೇ ರೀತಿಯ ಚುನಾವಣಾ ಸಂಭಂಧಿತ ಅಪರಾಧ ಕೃತ್ಯದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಪರವಾನಗಿ ಈ ಮೇಲ್ಕಂಡ ವರ್ಗದಲ್ಲಿರೋ ವ್ಯಕ್ತಿಗಳು ಖಡ್ಡಾಯವಾಗಿ ಗನ್ ಜಮೆ ಮಾಡಬೇಕು. ಈ ವರ್ಗಕ್ಕೆ ಒಳಪಡದ ವ್ಯಕ್ತಿಗಳು ಗನ್ ಜಮೆ ಮಾಡುವ ಅಗ್ಯವಿಲ್ಲ ಎಂದು ಇಲಾಖೆ ಆದೇಶ ಹೊರಡಿಸಿದೆ.

Advertisement
Next Article