ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಚೀನಾದಿಂದ ಪಾಕ್‌ಗೆ ಸರಕು ಸಾಗಿಸುತ್ತಿದ್ದ ಹಡಗು ವಶಕ್ಕೆ

09:59 AM Mar 03, 2024 IST | Bcsuddi
Advertisement

ಮುಂಬೈ: ಚೀನಾದಿಂದ ಪಾಕಿಸ್ತಾನದ ಕರಾಚಿಗೆ ಭಾರೀ ಸರಕು ಹೊತ್ತು ಹೊರಟಿದ್ದ ಹಡಗನ್ನು ಭಾರತದ ಭದ್ರತಾ ಸಂಸ್ಥೆಯ ಅಧಿಕಾರಿಗಳು ಮುಂಬೈನ ನ್ಹಾವಾ ಶೇವಾ ಬಂದರಿನಲ್ಲಿ ವಶಕ್ಕೆ ಪಡೆದಿದ್ದಾರೆ.

Advertisement

ಈ ಹಡಗು ಪಾಕ್ ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗೆ ಬಳಸಬಹುದಾದ ಸರಕು ಹೊಂದಿರುವ ಅನುಮಾನದ ಮೇರೆಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದ ಮೇರೆಗೆ ಮಾಲ್ಟಾ ದೇಶದ ಧ್ವಜ ಹೊಂದಿದ್ದ ‘ಸಿಎಂಎ ಸಿಜಿಎಂ ಆ್ಯಟಿಲಾ’ ಹೆಸರಿನ ಹಡಗನ್ನು ಜ. 23 ರಂದು ಕಸ್ಟಮ್ಸ್ ಅಧಿಕಾರಿಗಳು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಡಗಿನಲ್ಲಿ ನಾಗರಿಕ ಮತ್ತು ಸೇನಾ ಬಳಕೆ ಇವೆರಡಕ್ಕೂ ಉಪಯೋಗವಾಗುವ ತಂತ್ರಜ್ಞಾನದ ಸರಕು ಇರುವುದು ದೃಢಪಟ್ಟಿದೆ ಎಂದು ಶನಿವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಈ ಹಡಗಿನಲ್ಲಿ ಇಟಲಿಯ ಕಂಪನಿಯೊಂದು ತಯಾರಿಸಿರುವ ಕಂಪ್ಯೂಟರ್‌ ನ್ಯೂಮರಿಕಲ್‌ ಕಂಟ್ರೋಲ್‌ (ಸಿಎನ್‌ಸಿ) ಯಂತ್ರಗಳು ಇದ್ದವು. ಹಡಗಿನಲ್ಲಿ ಸಾಗಿಸುತ್ತಿದ್ದ ಸರಕುಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಹಡಗಿನಲ್ಲಿ ಪತ್ತೆಯಾದ ಸಿಎನ್‌ಸಿ ಯಂತ್ರಗಳನ್ನು ಪಾಕ್ ತನ್ನ ಪರಮಾಣು ಕಾರ್ಯಕ್ರಮಗಳಿಗೆ ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಇನ್ನು ಈ ಹಡಗಿನಲ್ಲಿ ಸುಮಾರು 22,180 ಕೆ.ಜಿಯಷ್ಟು ಸರಕನ್ನು ಸಾಗಿಸಲಾಗುತ್ತಿತ್ತು. ದಾಖಲೆಗಳ ಹಾಗೂ ಸರಕು ಸಾಗಣೆಯ ಬಿಲ್ ಗಳ ಪ್ರಕಾರ ಈ ಸರಕನ್ನು ಚೀನಾದ ‘ಶಾಂಘೈ ಜೆಎಕ್ಸ್‌ಇ ಗ್ಲೋಬಲ್‌ ಲಾಜಿಸ್ಟಿಕ್ಸ್‌’ ಕಂಪನಿಯು ಪಾಕ್ ನ ಸಿಯಾಲ್‌ಕೋಟ್‌ನ ‘ಪಾಕಿಸ್ತಾನ್ ವಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌’ ಕಂಪನಿಗೆ ಕಳುಹಿಸಿದೆ ಎಂದು ತಿಳಿದುಬಂದಿದೆ.

Advertisement
Next Article