For the best experience, open
https://m.bcsuddi.com
on your mobile browser.
Advertisement

ಚಿಕಾಗೋದಲ್ಲಿ 8 ಮಂದಿಯ ಗುಂಡಿಕ್ಕಿ ಹತ್ಯೆಗೈದು ಅಪರಿಚಿತ ವ್ಯಕ್ತಿ ಪರಾರಿ

11:16 AM Jan 24, 2024 IST | Bcsuddi
ಚಿಕಾಗೋದಲ್ಲಿ 8 ಮಂದಿಯ ಗುಂಡಿಕ್ಕಿ ಹತ್ಯೆಗೈದು ಅಪರಿಚಿತ ವ್ಯಕ್ತಿ ಪರಾರಿ
Advertisement

ಅಮೇರಿಕಾ: ಚಿಕಾಗೋದ ಉಪನಗರಗಳ ಮೂರು ಸ್ಥಳಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 8 ಜನರನ್ನು ಗುಂಡಿಕ್ಕಿ ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಇಲಿನಾಯ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಜೋಲಿಯೆಟ್ ಮತ್ತು ವಿಲ್ ಕೌಂಟಿಯ ಪೊಲೀಸರು ಮಾಹಿತಿ ನೀಡಿದ್ದು, ಆ ವ್ಯಕ್ತಿ ಯಾವ ಕಾರಣಕ್ಕಾಗಿ ಹತ್ಯೆ ಮಾಡಿದ್ದಾನೆ ಎಂಬುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ಆದರೆ ಆ ವ್ಯಕ್ತಿಗೆ ತಾನು ಕೊಂದ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ ಎಂದಿದ್ದಾರೆ.

ಇನ್ನು ಪರಾರಿಯಾದ ಕೊಲೆ ಆರೋಪಿಯ ಪತ್ತೆಗಾಗಿ ಎಫ್‌ಬಿಐನ ಕಾರ್ಯಪಡೆ ಸ್ಥಳೀಯ ಪೊಲೀಸರಿಗೆ ಸಹಾಯ ಮಾಡುತ್ತಿದೆ ಎಂದು ಜೋಲಿಯೆಟ್ ಪೊಲೀಸ್ ಮುಖ್ಯಸ್ಥ ವಿಲಿಯಂ ಇವಾನ್ಸ್ ತಿಳಿಸಿದ್ದಾರೆ.

Advertisement

ಸತ್ತ ಎಂಟು ಮಂದಿ ವ್ಯಕ್ತಿಗಳ ಶವ ಭಾನುವಾರ ಮತ್ತು ಸೋಮವಾರದಂದು ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿದ್ದು, ಸದ್ಯ ಪರಾರಿಯಾದ ಕೊಲೆ ಆರೋಪಿಗಾಗಿ ಸ್ಥಳೀಯ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

Author Image

Advertisement